ಪುತ್ತೂರು : ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವಂತಹ ನಳಿನ್ ಕುಮಾರ್ ಕಟೀಲ್ ರವರ ಕುಂಜಾಡಿ ಮನೆತನದ ಧರ್ಮ ದೈವ ಹಾಗೂ ಉಪದೈವಗಳ ಧರ್ಮನಡಾವಳಿ ನೇಮೋತ್ಸವವು ಏ.8,9 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಕುಂಜಾಡಿ ಮನೆತನವು ಹಲವು ವರ್ಷಗಳ ಇತಿಹಾಸ ಹೊಂದಿರುವ ಮನೆತನವಾಗಿದೆ. ಈ ಕುಟುಂಬದ ಧರ್ಮದೈವಗಳ ನೇಮೋತ್ಸವವು ಕಳೆದ 68 ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಇದೀಗ ಮತ್ತೆ ಅದೇ ವೈಭವವು ಮರುಕಲಿಸುತ್ತಿದ್ದು, ಧರ್ಮದೈವ ಮತ್ತು ಉಪದೈವಗಳ ಧರ್ಮ ನಡಾವಳಿ ನೇಮೋತ್ಸವವು ಏ.6,7,8,9 ರಂದು ವಿಜೃಂಭಣೆಯಿಂದ ನಡೆಯಲಿದೆ.
ಧರ್ಮ ನಡಾವಳಿ ನೇಮೋತ್ಸವದ ಸಿದ್ಧತೆಗಾಗಿ ನಿರಂತರವಾಗಿ ಜೆಸಿಬಿ ಮತ್ತು ಹಿಟಾಚಿಗಳ ಮೂಲಕ ವಿಶಾಲವಾದ ಮೈದಾನದ ನಿರ್ಮಾಣ ಕಾರ್ಯವು ನಿರಂತರವಾಗಿ ನಡೆಯುವತ್ತಿದ್ದು. ಈ ಪ್ರದೇಶಕ್ಕೆ ಬರುವ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಸುಮಾರು ಒಂದು ಲಕ್ಷ ಮಂದಿ ಸೇರುವಂತಹ ಪೆಂಡಾಲ್ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ನಿರಂತರ ಬರುವ ಭಕ್ತರಿಗಾಗಿ ಅನ್ನಸಂತರ್ಪಣೆ ಕೂಡ ನಡೆಯಲಿದ್ದು ಅದರ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳು ಮಂಗಳೂರಿನ ಸಂಸದರಾದದಂತಹ ನಳಿನ್ ಕುಮಾರ್ ಕಟೀಲ್ ರವರ ನೇತೃತ್ವದಲ್ಲಿ ಭರದಿಂದ ಸಾಗುತ್ತಿದೆ.