ಪುತ್ತೂರು: ಸೆಪ್ಟೆಂಬರ್ / ಅಕ್ಟೋಬರ್ 2020 ರಲ್ಲಿ ನಡೆದ ಯುಜಿ ಮತ್ತು ಪಿಜಿ ಪರೀಕ್ಷೆಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಂತಿಮ ಶ್ರೇಯಾಂಕ ಪಡೆದವರ ಪಟ್ಟಿಯನ್ನು ಪ್ರಕಟಿಸಿದಂತೆ, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜು ಒಂಬತ್ತು ಶ್ರೇಯಾಂಕಗಳನ್ನು ಪಡೆದಿದೆ. ಬಿಬಿಎಯಲ್ಲಿ ಶ್ರೀಮತಿ ಮೈತ್ರಿ ಕೆ ಬಿ 90.86 ಶೇಕಡಾ ಅಂಕಗಳೊಂದಿಗೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಬಿ.ಎಸ್.ಡಬ್ಲ್ಯೂನಲ್ಲಿ ಶ್ರೀಮತಿ ಅಕ್ಷತಾ ಎಸ್ 85.62 ಶೇಕಡಾ ಅಂಕಗಳೊಂದಿಗೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಬಿಕಾಂನಲ್ಲಿ ಶ್ರೀಮತಿ ದೀಪಾ ಸಿ ಭಟ್ 94.54 ಶೇಕಡಾ ಅಂಕಗಳೊಂದಿಗೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
ಎಂಕಾಮ್ ನಲ್ಲಿ ಶ್ರೀಮತಿ ಜೋಶಿಲಾ ಮರಿಟಾ ಮೆನೆಜೆಸ್ ಸಿಜಿಪಿಎ 8.53 ರೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ, ಶ್ರೀಮತಿ ನವಶ್ರೀ ರೈ ಕೆ ಸಿಜಿಪಿಎ 8.25 ರೊಂದಿಗೆ ನಾಲ್ಕನೇ ರ‍್ಯಾಂಕ್ ಮತ್ತು ಶ್ರೀಮತಿ ಹರ್ಷಿತಾ ಎಸ್ ಕೆ ಒಂಬತ್ತನೇ ರ‍್ಯಾಂಕ್ ಸಿಜಿಪಿಎ 8.10 ಪಡೆದಿದ್ದಾರೆ. ಎಂಎಸ್ಸಿ (ಭೌತಶಾಸ್ತ್ರ) ದಲ್ಲಿ, ಶ್ರೀಮತಿ ಪ್ರಮಿತಾ ಎ ಸಿಜಿಪಿಎ 8.60 ರೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ ಮತ್ತು ಶ್ರೀಮತಿ ತುಷಾರ ಆರ್ ಬಿ ಸಿಜಿಪಿಎ 8.51 ರೊಂದಿಗೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಎಂಎಸ್ಸಿ (ಕಂಪ್ಯೂಟರ್ ಸೈನ್ಸ್) ನಲ್ಲಿ ಶ್ರೀಮತಿ ನಮೀಷಾ ಎಸ್ ರಾವ್ ಸಿಜಿಪಿಎ 9.34 ರೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.