ಉಡುಪಿ : ಮಲ್ಪೆ ಬೀಚ್‍ನಲ್ಲಿ ನಿಲ್ಲಿಸಿದ್ದ ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಬಳಸುವ ಟ್ರ್ಯಾಕ್ಟರ್ ಅಗ್ನಿಗಾಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಗುರುವಾರ ನಡೆದಿದೆ. ಮಲ್ಪೆ ಬೀಚ್‍ನಲ್ಲಿರುವ ಕಸಗಳನ್ನು ತೆಗೆಯುವ ಯಂತ್ರವನ್ನು ಎಳೆದೊಯ್ಯುವ ಟ್ರ್ಯಾಕ್ಟರನ್ನು ಯಂತ್ರದೊಂದಿಗೆ ನಿಲ್ಲಿಸಲಾಗಿತ್ತು. ಆದರೆ ಗುರುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಟ್ಯ್ರಾಕ್ಟರ್ ಅಗ್ನಿಗಾಹುತಿಯಾಗಿದೆ.
ಇದು ಆಕಸ್ಮಿಕ ಘಟನೆಯೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇನ್ನು ಟ್ಯ್ರಾಕ್ಟರ್ ಜೊತೆಗೆಯೇ ಇದ್ದ ಕ್ಲೀನಿಂಗ್ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮಲ್ಪೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬೀಚ್ ಅಭಿವೃದ್ಧಿ ಸಮಿತಿಯವರು ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.