ನವದೆಹಲಿ: ಕಳೆದ ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ ₹1.23 ಲಕ್ಷ ಕೋಟಿ ಜಿಎಸ್ಟಿ ಹಣ ಸಂಗ್ರಹವಾಗಿದ್ದು, ಕಳೆದ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಂದರೆ ಶೇಕಡ 27ರಷ್ಟು ಜಿಎಸ್ಟಿ ಸಂಗ್ರಹವಾಗಿದೆ ಅಂತಾ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ 6 ತಿಂಗಳಿನಿಂದ ಜಿಎಸ್ಟಿ ಆದಾಯವು 1 ಲಕ್ಷ ಕೋಟಿಗೂ ಹೆಚ್ಚು ಸಂಗ್ರಹವಾಗಿದೆ. ಕೊರೊನಾ ಸೋಂಕು ದೂರುವಾಗುತ್ತಿರುವ ಬೆನ್ನಲ್ಲೇ ಜಿಎಸ್ಟಿ ಆದಾಯ ಹೆಚ್ಚುತ್ತಿರೋದು ಕಂಡುಬರುತ್ತಿದೆ. ಫೇಕ್ ಬಿಲ್ಲಿಂಗ್ ಮೇಲೆ ಐಟಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಕಣ್ಣಿಟ್ಟು ಕಾರ್ಯಾಚರಣೆ ನಡೆಸಿದ್ದರಿಂದಲೂ ಜಿಎಸ್ಟಿ ಆದಾಯ ದುಪ್ಪಟ್ಟು ಸಂಗ್ರಹವಾಗಲು ಕಾರಣವಾಗಿದೆ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ.
2021ರ ಮಾರ್ಚ್ನಲ್ಲಿ ₹1,23,902 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಅದರಲ್ಲಿ ಸೆಂಟ್ರಲ್ ಜಿಎಎಸ್ಟಿ ₹22,973 ಕೋಟಿಯಾಗಿದ್ರೆ, ಸ್ಟೇಟ್ ಜಿಎಸ್ಟಿ ₹29,329 ಕೋಟಿಯಾಗಿದೆ. ಜೊತೆಗೆ ಇಂಟಿಗ್ರೇಟೆಡ್ ಜಿಎಸ್ಟಿ ₹62,842 ಕೋಟಿಯಾಗಿದೆ. ಇದರಲ್ಲಿ ₹31,097 ಕೋಟಿ ಹಣ ಸರಕುಗಳ ಆಮದಿನಿಂದ ಬಂದಿದೆ. ಇನ್ನು ಇತರೆ ವಸ್ತುಗಳ ಮೇಲಿನ ಸೆಸ್ಸ್ನಿಂದ ₹8,757 ಕೋಟಿ ಹಣ ಸಂಗ್ರಹವಾಗಿದೆ.