ಪುತ್ತೂರು: ಅವಿವಾಹಿತ ಯುವಕನೋರ್ವ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುಣಚ ಅಜೇರುಮಜಲು ನಿವಾಸಿ ಬಾಲಕೃಷ್ಣ(39) ಕಾಣೆಯಾದವರು.

ಬಾಲಕೃಷ್ಣ ರವರು ಗಾರೆ ಕೆಲಸ ಮಾಡಿಕೊಂಡಿದ್ದು, ಅವಿವಾಹಿತರಾಗಿದ್ದಾರೆ.
ಬಾಲಕೃಷ್ಣ ರವರು ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಸುಮಾರು 1 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದು, ಸರಿಯಾಗಿ ಸಂಘಕ್ಕೆ ಮರುಪಾವತಿ ಮಾಡದೇ ಇದ್ದು, ಅಷ್ಟೇ ಅಲ್ಲದೇ ಸ್ಥಳೀಯವಾಗಿ ಕೆಲವರಿಂದ ಹಣವನ್ನು ಕೈ ಸಾಲವಾಗಿ ಪಡೆದು ಅದನ್ನು ಹಿಂತಿರುಗಿಸದೆ ಇದ್ದು, ಕೆಲವರು ಹಣ ಮರು ಪಾವತಿಸುವಂತೆ ಒತ್ತಡ ಏರುತ್ತಿದ್ದರು.
ಆ.8 ರಂದು ಬಾಲಕೃಷ್ಣ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದು, ಮನೆಯಲ್ಲಿ ಇನ್ನೂ ಮುಂದಕ್ಕೆ ಮನೆಗೆ ಬರುವುದಿಲ್ಲ ಎಂದು ಹೊರಟು ಹೋಗಿದ್ದು, ಆತನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 128/2022 ರಂತೆ ಪ್ರಕರಣ ದಾಖಲಾಗಿದೆ..