ಪುತ್ತೂರು: ಚಪ್ಪಲಿ ಅಂಗಡಿಯೊಂದರಿಂದ ಇಬ್ಬರು ಕಳ್ಳರು ಹಣ ಕದ್ದೊಯ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಜಿ.ಎಲ್. ಕಾಂಪ್ಲೆಕ್ಸ್ ನ ಮುಂಭಾಗದಲ್ಲಿರುವ ಸ್ಟೆಪ್ ಝೋನ್ ಚಪ್ಪಲಿ ಶಾಪ್ ನಿಂದ ಇಬ್ಬರು ಕಳ್ಳರು ಹಣ ಕದ್ದೊಯ್ದ ಘಟನೆ ನಡೆದಿದೆ.

ಈ ಬಗ್ಗೆ ಅಂಗಡಿ ಮಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುಮಾರು 18000 ರೂ. ಯಷ್ಟು ಹಣ ಕಳವಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಕಳ್ಳರು ಹಣ ಕಳವುಗೈದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇವರಿಬ್ಬರನ್ನು ಯಾರದರೂ ನೋಡಿದರೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

























