ಪುತ್ತೂರು: ಸದಾ ನ್ಯಾಯಾಲಯದ ಮಾಮೂಲಿ ಚಟುವಟಿಕೆಯಿಂದ ಮುಕ್ತವಾಗಲು ಮತ್ತು ಒತ್ತಡದ ಜಂಜಾಟದಿಂದ ಹೊರ ಬರಲು ಕ್ರೀಡೆ ಅಗತ್ಯ. ಇದರಿಂದ ಮನಸ್ಸಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಮಂಗಳೂರು ದ.ಕ.ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಬಿ ಅವರು ಹೇಳಿದರು.
ವಕೀಲರ ಸಂಘದ ಆಶ್ರಯದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಚುಟುವಟಿಕೆ ಮನಸ್ಸನ್ನು ಹಗುರವಾಗಿಸುತ್ತದೆ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ಫಲಿತಾಂಶ ನೀಡುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪೆರೇರಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಎ.ಸಿ.ಜೆ.ಎಂ ಮಂಜುನಾಥ್, ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ವೆಂಕಟೇಶ್ ಎನ್ ಉಪಸ್ಥಿತರಿದ್ದರು.
ಬೆಳಿಗ್ಗೆ ಕ್ರೀಡೆ ಪಂದ್ಯಾಟವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ ಪ್ರಕಾಶ್ ಪಿ.ಎಮ್ ಮತ್ತು ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಕಿಶನ್ ಬಿ ಮಡಲಗಿ ಅವರು ಉದ್ಘಾಟಿಸಿದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆ.ಎಮ್.ಎಫ್.ಸಿ ಲತಾದೇವಿ ಜಿ.ಎ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ್ ಎನ್.ಎಸ್ ವಂದಿಸಿದರು. ದೀಪಕ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸಂದೇಶ್ ನಟ್ಟಿಬೈಲು, ವಕೀಲರ ಸಂಘದ ಜತೆಕಾರ್ಯದರ್ಶಿ ಮಮತಾ ಬಿ.ಸುವರ್ಣ, ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ವಕೀಲರ ೪ ತಂಡ, ನ್ಯಾಯಾಲಯ ಸಿಬ್ಬಂದಿಗಳ ಒಂದು ತಂಡದಿಂದ ಪಂದ್ಯಾಟ:
ವಕೀಲರ ಸಂಘದ ೪ ತಂಡಗಳು ಮತ್ತು ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಸಿಬ್ಬಂದಿಗಳ ತಂಡದ ನಡುವೆ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಿತು. ಜಿ.ಜಗನ್ನಾಥ ರೈ, ಸ್ವಾತಿ ಜೆ.ರೈ ಅವರ ಟ್ರೆಂಡ್ ವಾರಿಯರ್‍ಸ್, ಕೆ.ಭಾಸ್ಕರ ಕೋಡಿಂಬಾಳ, ಕೆ.ಫಝ್ಲಲ್ ರಹೀಂ ಅವರ ರಿಯಲ್ ಫೈಟರ್ ತಂಡ, ಬಿ.ನರಸಿಂಹಪ್ರಸಾದ್ , ಮಹೇಶ್ ಕಜೆ ಅವರ ಸುಪರ್ ಸ್ಟೈಕರ್‍ಸ್, ಚಿದಾನಂದ ಬೈಲಾಡಿ ಮತ್ತು ಮಹಾಬಲ ಗೌಡ ಎ ಅವರ ಅರ್ಜುನ ವಾರಿಯರ್‍ಸ್ ತಂಡ ಮತ್ತು ಜುಡಿಷಿಯಲ್ ಇಲೆವನ್ ತಂಡದ ನಡುವೆ ಪಂದ್ಯಾಟ ನಡೆಯಿತು. ತ್ರೋಬಾಲ್‌ನಲ್ಲೂ ಕೂಡಾ ನಾಲ್ಕು ತಂಡಗಳು ಭಾಗವಹಿಸಿತ್ತು.