ಮಂಜೇಶ್ವರ : ಆರ್ ಎಸ್ ಎಸ್ ಹಿರಿಯ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ್ ಚೆಟ್ಟಿಯಾರ್ ಮನೆಯ ಮೇಲೆ ದುಷ್ಕರ್ಮಿಗಳ ದಾಳಿಯತ್ನ ನಡೆಸಿದ್ದಾರೆ. ಮಂಜೇಶ್ವರ ತಾಲೂಕಿನ ಪೆರ್ಲದ, ಬಜಕ್ಲೂಡ್ಲು ರಸ್ತೆಯಲ್ಲಿರುವ ಚೆಟ್ಟಿಯಾರ್ ಮನೆಗೆ ಬಂದ ಪುಂಡರು ರಾತ್ರಿ ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದು, ಪೆಟ್ರೋಲ್ ದಾಳಿ ಹಾಗೂ ಅಂಗಳದಲ್ಲಿ ನಿಲ್ಲಿಸಿದ ಸ್ವಿಫ್ಟ್ ಕಾರಿಗೆ ಕಲ್ಲೆಸೆತದು ಹಾನಿಗೊಳಿಸಿದ ಘಟನೆ ವರದಿಯಾಗಿದೆ.
ಮಂಜೇಶ್ವರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದ್ದು, ಚುನಾವಣಾ ಪ್ರಚಾರ ನಡೆಯುವ ಸಮಯದಲ್ಲಿ ಇಂತಹ ಸಮಾಜದ ಶಾಂತಿ ಕದಡುವ ಘಟನೆ ಖಂಡನೀಯ ಎಂದು ಕಿಡಿಕಾರಿದೆ. ಆರ್ ಎಸ್ ಎಸ್ ಮುಖಂಡರ ಮನೆಯ ದಾಳಿಯನ್ನು ಸಂಘಪರಿವಾರ ತೀಕ್ಷ್ಣವಾಗಿ ಖಂಡಿಸುತ್ತದೆ. ಇದರ ಪರಿಣಾಮ ಚುನಾವಣೆಯಲ್ಲಿ ವಿರೋಧಿಗಳು ಎದುರಿಸಬೇಕಾಗೀತು. ಇದು ವಿರೋಧಿ ಪಕ್ಷಗಳ ಕೃತ್ಯ ಎಂದು ಬಿಜೆಪಿ ಮೂಲಗಳು ಆರೋಪಿಸಿದೆ. ಪ್ರಕರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.