ಪುತ್ತೂರು: ರೋಟರಿಪುರ ನಿವಾಸಿ ಸತೀಶ್ ಸುವರ್ಣ (55) ರವರು ಆ.24 ರಂದು ನಿಧನರಾದರು.

ಸತೀಶ್ ರವರು ಮಾರ್ಕೆಟ್ ರೋಡ್ ರಸ್ತೆಯಲ್ಲಿ ಗ್ರೈಂಡರ್, ಪಂಪ್ ದುರಸ್ಥಿ ನಿರ್ವಹಿಸುತ್ತಿದ್ದು, ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಮೃತರು ಪತ್ನಿ ರೇಖಾ, ಮಗಳು ಮನ್ವಿತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

























