ಪುತ್ತೂರು: ದರ್ಬೆಯ ಉಷಾ ಪಾಲಿ ಕ್ಲಿನಿಕ್ ಪ್ರವರ್ತಿತ ಉಷಾ ಸ್ಕ್ಯಾನಿಂಗ್ ಸೆಂಟರ್ ಆ.25 ರಂದು ದರ್ಬೆಯ ಶ್ರೀರಾಮ ಸೌಧದಲ್ಲಿ ಶುಭಾರಂಭಗೊಳ್ಳಲಿದೆ.
ಸ್ಕ್ಯಾನಿಂಗ್ ಸೆಂಟರ್ ನ ಉದ್ಘಾಟನೆಯನ್ನು ಪುತ್ತೂರಿನ ಹಿರಿಯ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ ರವರು ನೆರವೇರಿಸಲಿದ್ದಾರೆ.
ಅಲ್ಟ್ರಾಸೌಂಡ್ ವಿಭಾಗವನ್ನು ಧನ್ವಂತರಿ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ರವಿಪ್ರಕಾಶ್ ಕಜೆ, ಎಕ್ಸ್ ರೇ ವಿಭಾಗವನ್ನು ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರು, ಹಿರಿಯ ಕೀಲು ಮತ್ತು ಎಲುಬು ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಭಾಸ್ಕರ್ ಎಸ್ ರವರು ಉದ್ಘಾಟಿಸಲಿದ್ದಾರೆ.
ಟಿ. ಎಂ. ಟಿ ವಿಭಾಗವನ್ನು ಪ್ರಗತಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರು, ಪ್ರೊಫೆಸರ್ ಆಫ್ ಮೆಡಿಸಿನ್ ಡಾ. ಶ್ರೀಪತಿ ರಾವ್ ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಐ.ಎಂ. ಎ. ಅಧ್ಯಕ್ಷರಾದ ಡಾ. ನರಸಿಂಹ ಶರ್ಮ ರವರು ಆಗಮಿಸಲಿದ್ದಾರೆ.
ನೂತನ ತಂತ್ರಜ್ಞಾನ ಹಾಗೂ ಉನ್ನತ ಗುಣಮಟ್ಟದ ಖಾತರಿಯೊಂದಿಗೆ ಸಂಪೂರ್ಣ ಸುಸಜ್ಜಿತ ಎಕ್ಸ್ ರೇ, ಅಲ್ಟ್ರಾಸೌಂಡ್, ಎಕೊ, ಟಿ.ಎಂ.ಟಿ., ಸೇವೆಗಳು ಇನ್ಮುಂದೆ ಒಂದೇ ಸೂರಿನಡಿ ಲಭ್ಯವಾಗಲಿದೆ.
ಉದ್ಘಾಟನಾ ಸಮಾರಂಭದ ಕೊಡುಗೆಯಾಗಿ 4,500 ರೂ. ಮೌಲ್ಯದ ಆರೋಗ್ಯ ತಪಾಸಣೆಯನ್ನು ಕೇವಲ 2,500 ಕ್ಕೆ ಪಡೆಯಬಹುದಾಗಿದೆ.