ಪುತ್ತೂರು : ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರ ಕಟ್ಟೆ ರವರು ಅವರ ಖಾತೆಗೆ ತಪ್ಪಿ ಬಂದಂತಹ 59000 ರೂ. ಮತ್ತು 20000 ರೂ. ಒಟ್ಟು 79000 ರೂ. ಹಣವನ್ನು ಅದರ ವಾರಿಸುದಾರಾದ ಪುತ್ತೂರಿನ ಫಾತಿಮರನ್ನು ಹುಡುಕಿ ಅವರಿಗೆ ಹಣ ಹಿಂದಿರುಗಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಇವರ ಈ ಕಾರ್ಯಕ್ಕೆ ಸಿಟಿ ಯಂಗ್ ಬಿಗ್ರೇಡ್ ಪುತ್ತೂರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಸಂಚಾಲಕರಾದ ಸಿಯಾಬ್ ಜಾಬಿರ್, ರಫೀಕ್ ಷರೀಫ್ ಬಲ್ನಾಡ್ ಹಾಗೂ ಉದ್ಯಮಿಗಳಾದ ಅಶೋಕ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.