ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಮಂಗಳೂರು ಸಂಪೂರ್ಣ ಸಜ್ಜುಗೊಂಡಿದ್ದು, ಸೆ.2 ರಂದು ನಡೆಯುವ ಪ್ರಧಾನಿಯವರ ಕಾರ್ಯಕ್ರಮಕ್ಕೆ ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದ್ದು, ಕಾರ್ಯಕ್ರಮದ ತಯಾರಿಗಳನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ವೀಕ್ಷಣೆ ಮಾಡಿದರು.

ಪ್ರಧಾನಿಯವರು ನಾಳೆ ಮಧ್ಯಾಹ್ನ12.30ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಅವರ ಆಗಮನದಿಂದ ನಿರ್ಗಮನದವರೆಗೆ ಬೇಕಾಗುವ ಎಲ್ಲಾ ಭದ್ರತೆಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ವ್ಯವಸ್ಥೆಗಳನ್ನು ಶಾಸಕರು ವೀಕ್ಷಣೆ ಮಾಡಿದರು.

ಪೊಲೀಸ್ ಆಯುಕ್ತರು ಸೇರಿದಂತೆ 100 ಜನ ಅಧಿಕಾರಿಗಳು, 2000 ಸಿವಿಕ್ ಪೊಲೀಸರು, ಕೆಎಸ್‌ಆರ್‌ಪಿ, ಎಎನ್‌ಎಫ್, ಸಿಎಆರ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಡಿಎಆರ್, ಆರ್‌ಎಎಫ್, ಐಎಸ್‌ಪಿ ಸೇರಿದಂತೆ ಒಟ್ಟು 3000 ಮಂದಿ ಅಧಿಕಾರಿ, ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಸೆ.2 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿಯವರು ನವಮಂಗಳೂರು ಬಂದರಿಗೆ ತೆರಳಿ ವಿವಿಧ ಯೋಜನೆ ಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ, ಬಳಿಕ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.