ಮಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ 3800 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಅವರು, 3800 ಕೋಟಿ ರೂಪಾಯಿಗಳ ಶಿಲನ್ಯಾಸ, ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆಯನ್ನ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕದ ಮೀನುಗಾರಿಕೆ ಅಂತಾರಾಷ್ಟ್ರೀಯ ಮಟ್ಟಕ್ಕೆ
ತಲುಪಬೇಕು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಉತ್ಪಾದನಾ ವಲಯವನ್ನು ವಿಸ್ತರಿಸುವ ಅಗತ್ಯ ಇದೆ. ಮೇಕ್ ಇನ್ ಇಂಡಿಯಾ ವಿಸ್ತರಿಸುವುದು ಕೂಡ ಬಹಳ ಮುಖ್ಯ. ಇದಲ್ಲದೆ, ನಾವು ರಫ್ತು ಹೆಚ್ಚಿಸಬೇಕು ಆಮೂಲಕ ಉತ್ಪನ್ನಗಳ ವೆಚ್ಚವನ್ನು ವಿಶ್ವದ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಬೇಕು ಎಂದು ಕರೆ ನೀಡಿದರು.
11 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಯೋಜನೆ ಲಾಭ ಸಿಕ್ಕಿದೆ. ಕರ್ನಾಟಕದಲ್ಲಿ 55 ಲಕ್ಷ ಜನರಿಗೆ ಕಿಸಾನ್ ಯೋಜನೆ ಲಾಭ ಸಿಕ್ಕಿದೆ. ಮಾತ್ರವಲ್ಲ ಕರ್ನಾಟಕದ ಲಕ್ಷಗಟ್ಟಲೆ ಸಣ್ಣ ಉದ್ಯಮಿಗಳಿಗೆ ಸಾಲ ಸಿಕ್ಕಿದೆ. ಬಡವರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ದೋಣಿ ವಿತರಿಸಿದ್ದೇವೆ. ಕೆಲ ಹೊತ್ತಿನ ಹಿಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ್ದೇವೆ ಎಂದರು.
ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಈಡೇರಿಸುತ್ತಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಹಗಲು-ರಾತ್ರಿ ಕೆಲಸ ಮಾಡಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ
ಆಧುನಿಕ ಮೂಲಸೌಕರ್ಯ ನೀಡಲಾಗುತ್ತಿದೆ. 8 ವರ್ಷದಲ್ಲಿ
ಮೆಟ್ರೋ ನಗರಗಳ ಸಂಖ್ಯೆ 4 ಪಟ್ಟು ಹೆಚ್ಚಿದೆ. ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ತಲುಪಿದೆ ಅಂತಾ ಹೇಳಿದರು.
ದೇಶದಲ್ಲಿ 7,500 ಕಿ.ಮೀ.ಗೂ ಹೆಚ್ಚು ಕರಾವಳಿ ಪ್ರದೇಶವಿದೆ. ಕರಾವಳಿ ಪ್ರದೇಶದಿಂದ ನಾವು ಲಾಭ ಪಡೆದುಕೊಳ್ಳಬೇಕು. ಪ್ರವಾಸೋದ್ಯಮದ ಮೂಲಕ ಕರಾವಳಿಯ ಲಾಭ ಪಡೆಯಬೇಕು. ದೇಶದ ಮಧ್ಯಮ ವರ್ಗದ ಸಾಮರ್ಥ್ಯ ಹೆಚ್ಚಳವಾಗುತ್ತಿದೆ. ಪ್ರವಾಸೋದ್ಯಮ ಬಲವರ್ಧನೆಯಾದ್ರೆ ಬಡವರ ಅಭಿವೃದ್ಧಿ, ಹೆಚ್ಚುತ್ತಿರುವ ರಫ್ತು ಭಾರತದ ಅಭಿವೃದ್ಧಿಗೆ ನಿರ್ಣಾಯಕ ಅಂತಾ
ಹೇಳಿದರು.
8 ವರ್ಷದಲ್ಲಿ ಬಡವರಿಗಾಗಿ 3 ಕೋಟಿ ಮನೆ ನಿರ್ಮಾಣ ಆಗಿದೆ. ಆಧುನಿಕ ಮೂಲ ಸೌಕರ್ಯದ ನಿರ್ಮಾಣವಾಗುತ್ತಿದೆ. ಹೊಸ ಹೊಸ ಉದ್ಯೋಗಾವಕಾಶ ನೀಡಲು ಯೋಜನೆ ರೂಪಿಸಲಾಗಿದೆ. ವಿದ್ಯುತ್, ಶೌಚಾಲಯ, ಶುದ್ಧ ಕುಡಿಯುವ ನೀರಿಗೆ ಆದ್ಯತೆ
ನೀಡಲಾಗಿದೆ. ಕರ್ನಾಟಕದಲ್ಲಿ 8 ಲಕ್ಷ ಮನೆಗಳ ಹಸ್ತಾಂತರಿಸಲಾಗಿದೆ. ಜಲಜೀವನ್ ಮೂಲಕ 6 ಕೋಟಿ
ಕುಟುಂಬಗಳಿಗೆ ನೀರು ಪೂರೈಸಲಾಗಿದೆ. 3 ವರ್ಷದಲ್ಲಿ 6
ಕೋಟಿ ಕುಟುಂಬಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದಲ್ಲಿ 30 ಲಕ್ಷ ಜನರಿಗೆ ಕುಡಿಯುವ ನೀರು ಬಿಡದೆ
ಎಂದರು.
ಬಡವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿ
ಆಗಿದೆ. ಇದರಿಂದ 4 ಕೋಟಿ ಜನರಿಗೆ ಉಚಿತ ಚಿಕಿತ್ಸೆಯ ಲಾಭ ಸಿಕ್ಕಿದೆ. ಕರ್ನಾಟಕದಲ್ಲಿ 3 ಲಕ್ಷ ಜನಕ್ಕೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಸಿಕ್ಕಿದೆ. ಸಣ್ಣ ರೈತರು, ಮೀನುಗಾರರು, ರೈಲ್ವೆ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಯೋಜನೆಗಳ ಲಾಭ ಸಿಕ್ಕಿದೆ ಎಂದರು.