ಪುತ್ತೂರು: ಸ್ಕೂಟರ್ ಮತ್ತು ಕಾರೊಂದರ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮುಕ್ರಂಪಾಡಿ ಸಮೀಪ ಸೆ.3 ರ ರಾತ್ರಿ ನಡೆದಿದೆ.
ಮಂಗಳೂರು ಕಡೆಯಿಂದ ಸುಳ್ಯ ಕಡೆ ಹೋಗುತ್ತಿದ್ದ ಕಾರು ಮತ್ತು ಮುಂಡೂರು ಕಡೆಯಿಂದ ಬರುತ್ತಿದ್ದ ಡಿಯೋ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಮುಂಡೂರು ಕಂಪ ನಿವಾಸಿ ದೀಕ್ಷಿತ್ ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸಹಸವಾರ ಕಂಪ ನಿವಾಸಿ ವಿನೋದ್ ರವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಿಂದಾಗಿ ಸ್ಕೂಟರ್ ನಲ್ಲಿದ್ದ ವಿನೋದ್ ಮತ್ತು ದೀಕ್ಷಿತ್ ಕಾರಿನ ಬೋನೆಟ್ ಮೇಲೆ ಬಿದ್ದಿದ್ದು, ಕಾರು ಸ್ಕೂಟರ್ ಅನ್ನು ತುಸು ದೂರು ಡಾಮಾರು ರಸ್ತೆಯಲ್ಲಿ ಎಳೆದೊಯ್ದಿದೆ. ಕಾರಿನ ಎದುರಿನ ಗಾಜು ಹುಡಿಯಾಗಿದ್ದರಿಂದ ಕಾರಿನಲ್ಲಿದ್ದವರ ಪೈಕಿ ಓರ್ವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.