ಮಂಗಳೂರು: ಕುಂಪಲ ಹನುಮಾನ್ ನಗರದ ಹಿಂದೂ ಕಾರ್ಯಕರ್ತರೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಯಂತ್ ಎಸ್. ಕುಂಪಲ (49) ಆತ್ಮಗತ್ಯೆಗೆ ಶರಣಾದವರು.

ಜಯಂತ್ ಹಿಂದೂ ಯುವ ಸೇನೆಯ ಸಕ್ರಿಯ ಕಾರ್ಯಕರ್ತರಾಗಿದ್ದು, ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದರು. ಹನುಮಾನ್ ನಗರದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು, ಇದರ ಅಂತಿಮ ಹಂತದ ಕೆಲಸ ನಡೆಯುತ್ತಿತ್ತು. ಹಿಂದೂ ಯುವ ಸೇನಾದ ಆರಂಭಿಕ ದಿನಗಳಲ್ಲಿ ನಾಯಕನಾಗಿ ಕೆಲಸ ಮಾಡಿದ್ದರು.
ಸಂಜೆ ಪತ್ನಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.