ಮಂಗಳೂರು: ಪೊಲೀಸ್ ವಿಭಾಗದ ಸ್ಫೋಟಕ ಪತ್ತೆ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 11 ವರ್ಷ 2 ತಿಂಗಳು ಪ್ರಾಯದ ಗೀತಾ ಹೆಸರಿನ ಶ್ವಾನ ಮೃತಪಟ್ಟಿದೆ.

ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಶ್ವಾನ 11 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿತ್ತು.
ಗಣ್ಯರ ಆಗಮನ ಸೇರಿದಂತೆ ಬಂದೋಬಸ್ತ್ ಸಂದರ್ಭ ಸ್ಫೋಟಕ ಪತ್ತೆ ಕಾರ್ಯವನ್ನು ಗೀತಾ ಯಶಸ್ವಿಯಾಗಿ ನಿರ್ವಹಿಸಿತ್ತು.