78 ವರ್ಷಗಳ ಪರಂಪರೆ ಮತ್ತು ನಂಬಿಕೆಯ ಮುಳಿಯ ಜ್ಯುವೆಲ್ಸ್ ಇದೇ ಸಪ್ಟೆಂಬರ್ 8 – 11ರ ವರೆಗೆ ಮಂಗಳೂರಿನಲ್ಲಿ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಎಕ್ಸಿಬಿಶನ್ ಏರ್ಪಡಿಸಿದೆ.
ಮಂಗಳೂರಿನ ನವಭಾರತ್ ವೃತ್ತದ ಓಷಿಯನ್ ಪರ್ಲ್ ನಲ್ಲಿ ನಡೆಯುವ ಈ ಎಕ್ಸಿಬಿಶನ್ ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ನೋಡಬಹುದು. ಮಂಗಳೂರು ಶೈಲಿಯ ವಿವಿದ ವಿನ್ಯಾಸದ ಕರ ಕುಶಲದ ಕರಿಮಣಿಗಳ, ಕೊಡಗಿನ ಮತ್ತು ಕರಾವಳಿಯ ಪರಂಪರಾಗತ ಆಭರಣಗಳು ಇಲ್ಲಿ ಲಭ್ಯ. ಕಿಸ್ನ ಬ್ರಾಂಡ್‌ನ ಡೈಮಂಡ್ ಆಭರಣಗಳು ಈ ಪ್ರದರ್ಶನದ ವಿಶೇಷ.
ಇಲ್ಲಿ ಕೊಳ್ಳುವ ಡೈಮಂಡ್ ಆಭರಣಗಳಿಗೆ ಮಾನ್ಯತೆ ಪತ್ರ ಹಾಗೂ 90% ಬೆಲೆಗೆ ಬೈ ಬಾಕ್ ಸೌಲಭ್ಯವಿದೆ. 5 ಸಾವಿರದಿಂದ 8 ಲಕ್ಷಕ್ಕೂ ಮೇಲಿನ ಡೈಮಂಡ್ ಆಭರಣಗಳು ಲಭ್ಯ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ, ವೇಣು ಶರ್ಮ “ಮುಳಿಯದ ಆಭರಣಗಳು ಯೂನಿಕ್ ಡಿಸೈನ್ ಗಳಾಗಿದ್ದು, ಒಮ್ಮೆ ಬಂದು ನೋಡಿ ಬೇಕಾದಂತವುಗಳು ಇಷ್ಟವಾದದ್ದು ಕೊಳ್ಳಬಹುದಲ್ಲವೇ”. ಮುಳಿಯ ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ ನಂಬಿಕೆಯನ್ನ ಹೆಚ್ಚಿಸಿದೆ ಎಂದರು.
(ಸಮಾಜಮುಖಿ ಸಂಸ್ಥೆ ಮುಳಿಯ 8 ದಶಕಗಳ ಹಿಂದೆ ಪುತ್ತೂರಿನಲ್ಲಿ ಆರಂಭವಾಗಿ ಚಿನ್ನೋಧ್ಯಮದಲ್ಲಿ ಹಲವು ಹೊಸತನಗಳನ್ನು ತಂದ ಸಂಸ್ಥೆಯಾಗಿದೆ. ವ್ಯವಹಾರದ ಜೊತೆಗೆ ಸಾಮಾಜಿಕ ಬದ್ಧತೆಯ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಾ ಜನ ಸಹಾಯ ಮಾಡಿದ ಹೆಮ್ಮೆಯು ಮುಳಿಯದ್ದು)
ಈ ಪ್ರದಶನ ಮತ್ತು ಮಾರಾಟ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನಡೆಯಲಿದ್ದು, ಈ ದಿನಗಳಲ್ಲಿ ಜ್ಯುವೆಲರಿ ಪ್ಯಾಶನ್ ಶೋ ಕೂಡ ನಡೆಯಲಿದೆ. ಈ ಸಂದರ್ಭದಲ್ಲಿ 9 ಸಮಾಜ ಮುಖಿ ಮಹಿಳೆಯರಿಂದ ಹಲವು ವಿನೂತನ ಆಭರಣಗಳು ಅನಾವರಣಗೊಳ್ಳಲಿವೆ. ಗ್ರಾಹಕರು ಈ ವಿಶೇಷ ಪ್ರದರ್ಶನ ಮತ್ತು ಮಾರಾಟ ಎಕ್ಸಿಬಿಷನ್‌ಗೆ ಬಂದು ವಿನೂತನ ಮತ್ತು ಟ್ರೆಂಡಿ ಆಭರಣಗಳನ್ನು ವೀಕ್ಷಿಸಬೇಕಾಗಿ ಆದರದ ಕರೆಯೋಲೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಳಿಯ ಸಂಸ್ಥೆಯ ಚೇರ್ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ ಮುಳಿಯ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ, ಪ್ರಬಂಧಕ ನಾಮದೇವ ಮಲ್ಯ ಹಾಗೂ ಕಿಸ್ನ ಡೈಮಂಡ್ ನ ಪ್ರಬಂಧಕ ಪ್ರಕಾಶ ಸಿಂತ್ರೆ ಉಪಸ್ಥಿತರಿದ್ದರು.
ಹೆಚ್ಚಿನ ವಿವರಗಳಿಗಾಗಿ smptr@muliyajewels.com ಮತ್ತು 9743175916 ಅನ್ನು ಸಂಪರ್ಕಿಸಬಹುದಾಗಿದೆ.