ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯು ಪ್ರಾರಂಭಗೊಂಡು 25 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಇಂದು ಬೆಳಗ್ಗೆ ಶಾಖೆಯಲ್ಲಿ ಗಣಪತಿ ಹವನ ನೆರವೇರಿಸುವುದರೊಂದಿಗೆ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್, ಹೆಚ್, ಉಪಾಧ್ಯಕ್ಷರಾದ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಎಂ. ಉದಯಕುಮಾರ್.ಎ. ಗೋವರ್ಧನ್ ಕುಮಾರ್ ಐ, ದಿವಾಕರ ಎ, ಜಯಂತಿ.ಹೆಚ್ ರಾವ್, ಶುಭಲಕ್ಷ್ಮಿ ಹಾಗೂ ಬ್ಯಾಂಕಿನ ಕಟ್ಟಡದ ಮಾಲೀಕರಾದ ತಿರುಮಲೇಶ್ವರ ಭಟ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.