ವಿಟ್ಲ: ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್. ರವರ ನೇತೃತ್ವದಲ್ಲಿ, 12ನೇ ವಾರ್ಡ್ ಬಿಜೆಪಿ ಬೂತ್ ಅಧ್ಯಕ್ಷರಾದ ಜಗದೀಶ್ ಅನ್ನಮೂಲೆ ಹಾಗೂ ಅಯೋಧ್ಯ ಫ್ರೆಂಡ್ಸ್ ಅನ್ನಮೂಲೆ ಸಹಕಾರದೊಂದಿಗೆ ಸೆ.11 ರಂದು ಪಳಿಕೆ-ಅನ್ನಮೂಲೆ ರಸ್ತೆಯನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.

ರಸ್ತೆ ಬದಿಯ ಗಿಡ, ಪೊದೆಗಂಟಿಗಳನ್ನು ತೆಗೆಯುವುದರ ಮೂಲಕ ರಸ್ತೆ ಬದಿಯನ್ನು ಸ್ವಚ್ಚಗೊಳಿಸಲಾಯಿತು.

12ನೇ ವಾರ್ಡ್ ಬಿಜೆಪಿ ಕಾರ್ಯಕರ್ತರು ಹಾಗೂ ಅಯೋಧ್ಯ ಫ್ರೆಂಡ್ಸ್ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್ ರವರು ತಮ್ಮ ಸ್ವಂತ ಹಣದಿಂದಲೇ ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರ ಜನಪರ ಕಾರ್ಯಗಳನ್ನು ನೆರವೇರಿಸುತ್ತಿದ್ದು, ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



