ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ” ಗಾಂಧಿ ಭವನ” ನಿರ್ಮಾಣಕ್ಕಾಗಿ ಹಾಗೂ ಸರಕಾರಿ ಜಮೀನನ್ನು ನಿವೃತ್ತಿ ಮಿಲಿಟರಿಯವರಿಗೆ ಹಾಗೂ ವಿಕಲಚೇತನರಿಗೆ,ಭೂಮಿ ಇಲ್ಲದ ಕಡು ಬಡವರಿಗೆ ಮಂಜೂರು ಮಾಡಬೇಕಾಗಿ ಕನ್ನಡ ಸೇನೆ ಕರ್ನಾಟಕ ದ. ಕ ಜಿಲ್ಲೆ ಮಂಗಳೂರು ಇವರ ವತಿಯಿಂದ ಉಪಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿ ತಾಲೂಕಿನಲ್ಲಿ ‘ಗಾಂಧಿ ಭವನ’ ನಿರ್ಮಾಣ ಮಾಡುವುದು ಸರಕಾರದ ಉದ್ದೇಶವಾಗಿರುತ್ತದೆ. ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮವು ಗಾಂಧಿ ಭವನದಲ್ಲಿ ನಡೆಸಲು ಇದರಿಂದಾಗಿ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದರು. ಕಡಬ ತಾಲೂಕಿನ ಅಲಂಕಾರು ಗ್ರಾಮದಲ್ಲಿ ನಿವೃತ್ತ ಮಿಲಿಟರಿಯವರಿಗೇ ಕಾಯ್ದಿರಿಸಿದ ಜಾಗವನ್ನು ಮಂಜೂರು ಮಾಡುವುದಕ್ಕೆ ಹಲವಾರು ದಾಖಲೆಗಳನ್ನು ಕೇಳುವುದು ಸರಿಯಲ್ಲ, ಕಾಯ್ದಿರಿಸಿದ ಜಾಗವನ್ನು ನಿವೃತ್ತ ಸಂದರ್ಭದಲ್ಲಿ ಕೃಷಿ ಮಾಡಲು ಉತ್ಸುಕರಾಗಿರುವ ವ್ಯಕ್ತಿಗಳಿಗೆ, ವಿಕಲಚೇತನರಿಗೆ, ಭೂಮಿ ಇಲ್ಲದ ಕಡು ಬಡವರಿಗೆ ಸ್ಥಳವನ್ನು ಮಂಜೂರು ಮಾಡಿದರೆ ಅನುಕೂಲವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭ ಚಂದ್ರಶೇಖರ ಎ, ದ. ಕ ಜಿಲ್ಲಾ ಅಧ್ಯಕ್ಷರು, ಕೆ. ಪ್ರವೀಣ್ ಶೆಟ್ಟಿ ದ. ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿ. ಜೆ ಗುರು ಚಂದ್ರ ಶೆಟ್ಟಿ, ಜಿಲ್ಲಾ ಕಾರ್ಯಧ್ಯಕ್ಷರು, ಚೆನ್ನಕೇಶವ ಬಿ. ಆರ್, ದ. ಕ ಜಿಲ್ಲಾ ಕಾರ್ಯದರ್ಶಿ, ಪ್ರಕಾಶ್ ದ. ಕ ಜಿಲ್ಲಾ ಸಂಚಾಲಕರು, ಉಪಸ್ಥಿತರಿದ್ದರು.