ಪುತ್ತೂರು: ಮನೆಯೊಳಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು ಕೋಣೆಯೊಳಗೆ ಕೂಡಿ ಹಾಕಿ ಬೆಳ್ಳಿ ನಾಣ್ಯ ಮತ್ತು ನಗದು ದೋಚಿದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಪರಣೆ ಎಂಬಲ್ಲಿ ನಡೆದಿದೆ.
ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ ಮಿತ್ರಾ ಜೈನ್ ಬಂಬಿಲಗುತ್ತು ಅವರ ಮನೆಯ ಬಳಿ ಬಂದು ಹಂಚು ತೆಗೆದು ಒಳನುಗ್ಗಿದ್ದ ಕಳ್ಳರು ಕೋಣೆಯಲ್ಲಿ ಮಲಗಿದ್ದ ಮಿತ್ರಾ ಜೈನ್ ಮತ್ತು ಅವರ ಪುತ್ರಿ ದಿವ್ಯರನ್ನು ಅದೇ ಕೋಣೆಯೊಳಗೆ ಕೂಡಿ ಹಾಕಿ ನಗದು ಹಾಗೂ ಬೆಳ್ಳಿ ನಾಣ್ಯಗಳನ್ನ ಕರೆದೊಯ್ದಿದ್ದಾರೆ. ಈ ಕುರಿತು ಮಿತ್ರಾ ಜೈನ್ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.