Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

    ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

    (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

    (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

    (ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

    (ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

    ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!

    ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!

    ವಿಟ್ಲ: 49ನೇ ವರ್ಷದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ.!

    ವಿಟ್ಲ: 49ನೇ ವರ್ಷದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ.!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಮೊಬೈಲ್ ಅಂಗಡಿ ಮಾಲಕ, ರಿಕ್ಷಾ ಚಾಲಕನ ಗಲಾಟೆ ಇಬ್ಬರೂ ಆಸ್ಪತ್ರೆಗೆ ದಾಖಲು..!!..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆಯ ಉಪನ್ಯಾಸ ಕಾರ್ಯಕ್ರಮ

April 5, 2021
in ಪುತ್ತೂರು
0
ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆಯ ಉಪನ್ಯಾಸ ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಭಾರತ ದೇಶವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಾಷ್ಟ್ರಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಯೋಚಿಸುತ್ತದೆ. ಆದರೆ ತ್ಯಾಗ ಮತ್ತು ದಾನದ ಕುರಿತು ಯೋಚಿಸುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಅಂತಹ ಶ್ರೇಷ್ಠ ಭೂಮಿಯಲ್ಲಿ ಜನಿಸಿದ ನಮ್ಮ ಆಲೋಚನೆಗಳು, ಐಶಾರಾಮ, ಆಡಂಭರದ ಜೀವನವನ್ನು ಮೀರಿ ಜನ್ಮಭೂಮಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಕ್ರಾಂತಿ, ಕಿಚ್ಚಿನ ಕಡೆ ಹೊರಳಬೇಕು ಎಂದು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಹೇಳಿದರು.

Advertisement
Advertisement
Advertisement

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆ ಪ್ರಯುಕ್ತ ರಾಷ್ಟ್ರರಕ್ಷಣೆಯಲ್ಲಿ ಯೋಧರ ಶೌರ್ಯ-ಬಲಿದಾನಗಳ ಸಾಹಸಗಾಥೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನೀಡುತ್ತಾ ಅವರು ಮಾತನಾಡಿದರು. ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಅಪ್ರತಿಮ ಶೌರ್ಯ-ಸಾಹಸಕ್ಕಾಗಿ ಭಾರತದಲ್ಲಿ ದೊರೆಯುವ ಅತಿ ಶ್ರೇಷ್ಠ ಸಮ್ಮಾನ ಪರಮವೀರ ಚಕ್ರ. ದೇಶರಕ್ಷಣೆಗಾಗಿ ಕೆಚ್ಚಿನ ಹೋರಾಟ ನಡೆಸುವ ಇಂಥ ವೀರಯೋಧರ ಸಾಹಸಗಾಥೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಹೆಮ್ಮೆ, ಶೌರ್ಯ ಮತ್ತು ಅಚಲ ನಾಯಕತ್ವಕ್ಕೆ ಕಾರ್ಗಿಲ್ ವಿಜಯ್ ದಿವಾಸ್ ಸಂಕೇತವಾಗಿದೆ. ಭಾರತೀಯ ಸೈನಿಕರ ಹೋರಾಟವು ಜಗತ್ತು ಇತ್ತೀಚೆಗೆ ಕಂಡ ಅತ್ಯಂತ ಶೌರ್ಯದ ಸಾಧನೆಯಾಗಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಪರಮವೀರ ಚಕ್ರ ಪುರಸ್ಕೃತರಾದ ಭಗತ್‌ಸಿಂಗ್, ಸುಖ್‌ದೇವ್ ತಾಪರ್ ಮತ್ತು ಶಿವರಾಮ್ ರಾಜ್‌ಗುರು ಅವರ ದೇಶಾಭಿಮಾನ, ಸ್ವಾತಂತ್ರ್ಯದ ಕಿಚ್ಚು, ದೇಶಕ್ಕಾಗಿ ಪ್ರಾಣ ತ್ಯಾಗದ ಧೈರ್ಯವನ್ನು ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿ ಇಂದಿನ ಯುವಕರಿಗೆ ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯ ಕುರಿತು ಜ್ಞಾನ, ಮಾರ್ಗದರ್ಶನ ಶಾಲೆ, ಕಾಲೇಜುಗಳಲ್ಲಿ ಸಿಗಬೇಕು ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ತಾರುಣ್ಯದ ಹೊಸ್ತಿಲಲ್ಲಿ ತನ್ನ ಸ್ವ ಆಕಾಂಕ್ಷೆಗಳನ್ನು ಬದಿಗಿರಿಸಿ ದೇಶಕ್ಕೋಸ್ಕರ ಪ್ರಾಣಾರ್ಪಣೆ ಗೈಯುವ ಸೈನಿಕರ ತ್ಯಾಗ ನಮ್ಮಗೆಲ್ಲರಿಗೂ ಪ್ರೇರಕವಾಗಬೇಕು. ದೇಶದ ಚರಿತ್ರೆಯನ್ನು ಸರಿಯಾಗಿ ಅರಿತು ದೇಶಕ್ಕಾಗಿ ಸಮಯ ಕೊಡುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್ ಹಾಗೂ ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಚರಣೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದ 22 ಸೈನಿಕರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಮೋನಿಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ದೇವಿಪ್ರಸಾದ್ ಸ್ವಾಗತಿಸಿ ದಿವ್ಯ ವಂದಿಸಿದರು.

Previous Post

ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಲಿದೆ ಹತ್ತೂರ ಒಡೆಯನ ಜಾತ್ರೋತ್ಸವ

Next Post

ದ.ಕ ಜಿಲ್ಲೆಯಾದ್ಯಂತ ” ಗಾಂಧಿ ಭವನ” ನಿರ್ಮಾಣ ಹಾಗೂ ಸರಕಾರಿ ಜಮೀನನ್ನು ನಿವೃತ್ತಿ ಮಿಲಿಟರಿಯವರಿಗೆ,ವಿಕಲಚೇತನರಿಗೆ,ಕಡು ಬಡವರಿಗೆ ಮಂಜೂರು ಮಾಡಲು ಕನ್ನಡ ಸೇನೆ ಕರ್ನಾಟಕ ವತಿಯಿಂದ ಉಪಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

OtherNews

ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!
ಕ್ರೈಮ್

ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

September 12, 2026
(ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!
ಪುತ್ತೂರು

(ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

September 12, 2026
ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!
Featured

ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!

September 12, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಪುತ್ತೂರು

ಪುತ್ತೂರು: ಮೊಬೈಲ್ ಅಂಗಡಿ ಮಾಲಕ, ರಿಕ್ಷಾ ಚಾಲಕನ ಗಲಾಟೆ ಇಬ್ಬರೂ ಆಸ್ಪತ್ರೆಗೆ ದಾಖಲು..!!..!!

September 12, 2026
ಆಂಧ್ರಪ್ರದೇಶದಲ್ಲಿ ನಡೆದ ಮೂರು ಓಟ ಸ್ಪರ್ಧೆಗಳಲ್ಲಿ ಚಿನ್ನದ ಪದಕ: ಕುಮಾರಿ ಆತ್ಮಿಗೆ ಸನ್ಮಾನ..!
ಪುತ್ತೂರು

ಆಂಧ್ರಪ್ರದೇಶದಲ್ಲಿ ನಡೆದ ಮೂರು ಓಟ ಸ್ಪರ್ಧೆಗಳಲ್ಲಿ ಚಿನ್ನದ ಪದಕ: ಕುಮಾರಿ ಆತ್ಮಿಗೆ ಸನ್ಮಾನ..!

September 11, 2026
ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನೆ: ಸೀತಾ ಪರಿವಾರದ ನೂತನ ಪದಾಧಿಕಾರಿಗಳ ಆಯ್ಕೆ..!
ಪುತ್ತೂರು

ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನೆ: ಸೀತಾ ಪರಿವಾರದ ನೂತನ ಪದಾಧಿಕಾರಿಗಳ ಆಯ್ಕೆ..!

September 11, 2026

Leave a Reply Cancel reply

Your email address will not be published. Required fields are marked *

Recent News

(ಸೆ.13) :’ಎಸ್‌.ಜಿ ಪ್ಯೂರ್’ ಸೂಪರ್ ಮಾರ್ಕೆಟ್ ಶುಭಾರಂಭ..!

(ಸೆ.13) :’ಎಸ್‌.ಜಿ ಪ್ಯೂರ್’ ಸೂಪರ್ ಮಾರ್ಕೆಟ್ ಶುಭಾರಂಭ..!

September 12, 2026
ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

September 12, 2026
(ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

(ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

September 12, 2026
(ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

(ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

September 12, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.