ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವವು 2023 ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಕಾರ್ಯದ ಯಶಸ್ವಿಗೆ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಂತೆ ಕ್ಷೇತ್ರದ ವಲಯ ಸಮಿತಿಯನ್ನು ರಚಿಸುವ ಸಂಕಲ್ಪದಂತೆ ಇತ್ತೀಚಿಗೆ ಶ್ರೀಕ್ಷೇತ್ರ ನೇಲ್ಯ ಇಲ್ಲ್ ಇದರ ಧರ್ಮದರ್ಶಿಗಳಾದ ಪ್ರವೀಣ್ ಗುರಿಕಾರರು ದೀಪ ಬೆಳಗಿಸಿ ವಲಯ ಸಮಿತಿಯ ರಚನೆಗೆ ಚಾಲನೆ ನೀಡಿದರು.

ದ.ಕ. ಗ್ಯಾರೇಜ್ ಮಾಲಿಕರ ಸಂಘದ ಅಧ್ಯಕ್ಷರಾದ ಪುಂಡಲೀಕ ಸುವರ್ಣ, ಖ್ಯಾತ ಉದ್ಯಮಿ ರಾಜು ನಾಯ್ಕ್, ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳಾದ ಶ್ರೀಧರ್ ಪಿ.ಕೆ ಕುಕ್ಕಾಜೆ, ಹರೀಶ್ ಕಾಮಜಾಲು, ರವಿ ಎಸ್.ಎಂ ಕುಕ್ಕಾಜೆ, ಲಕ್ಷ್ಮಣ ಪಿಲಿಂಗುರಿ ,ಗಣೇಶ ಪಿಲಿಂಗುರಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಯಶಸ್ವಿಯಾಗುವಂತೆ ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳ ಭೇಟಿ ನೀಡುವ ಮೂಲಕ ವಲಯ ಸಮಿತಿಯನ್ನು ರಚಿಸಿಸುವ ಯೋಜನೆಯನ್ನು ಕೈಗೊಂಡಿರುತ್ತೇವೆ ಇದಕ್ಕೆ ಎಲ್ಲಾ ಸಂಘಟನೆಗಳು ಸಹಕರಿಸುವಂತೆ ವಿನಂತಿ ಮಾಡುತ್ತೇವೆ. ಈ ಮೂಲಕ ಕ್ಷೇತ್ರದ ಬ್ರಹ್ಮಕಲಶೋತ್ಸವದ ಯಶಸ್ವಿಯಾಗಿ ನಡೆಯುವಂತೆ ಕೈ ಜೋಡಿಸಬೇಕೆಂದು ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳು ವಿನಂತಿಸಿದರು.
ಉಳ್ಳಾಲ ವಲಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರವೀಣ ಗುರಿಕಾರ, ಕಾರ್ಯದರ್ಶಿಯಾಗಿ ರಾಜು ನಾಯ್ಕ್, ಸದಸ್ಯರು ಶ್ರಾವಣ್ ಉಳ್ಳಾಲ್, ಕಿರಣ್ ಉಳ್ಳಾಲ್, ಶ್ರಾವಣ್ ಕುಮಾರ್ ಉಳ್ಳಾಲ್, ಸಾಗರ್ ಉಳ್ಳಾಲ್, ರೋಹಿಣಿ ಉಳ್ಳಾಲ್, ಧನಲಕ್ಷ್ಮಿ ಉಳ್ಳಾಲ್, ಸಂಗ್ರಾಮ್, ಗಣೇಶ್ ಶೆಟ್ಟಿಗಾರ್ ಉಳ್ಳಾಲ್, ಬಬಿತಾ ಉಳ್ಳಾಲ್, ಅನುಷ ಉಳ್ಳಾಲ್ ಆಯ್ಕೆಯಾದರು. ಕಿರಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.