ಪುತ್ತೂರು: ಎರಡನೇ ವರ್ಷಕ್ಕೆ ಪಾರ್ದಾಪಣೆ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಸಂಸ್ಥೆ ಭಾರತದ ನಂಬರ್ ಒನ್ ಜಿಮ್ ವ್ಯಾಯಾಮ ಸಲಕರಣೆಗಳ ಕಂಪನಿಯಾದ ಜೆರಾಯಿ ಫಿಟ್ನೆಸ್ ವ್ಯಾಯಾಮ ಸಲಕರಣೆಗಳನ್ನು ಅಳವಡಿಸುವುದರೊಂದಿಗೆ ಪುತ್ತೂರಿನ ವ್ಯಾಯಾಮ ಪ್ರಿಯರಿಗೆ ಅಪೂರ್ವ ಕೊಡುಗೆಯನ್ನು ನೀಡಿದೆ.

ನೂರಾರು ಜನರು ವ್ಯಾಯಾಮ ಪಡೆಯುತ್ತಿರುವ ಕ್ರಿಸ್ಟೋಫರ್ ಫಿಟ್ನೆಸ್ ಜಿಮ್ ಇದೀಗ ತನ್ನ ಸದಸ್ಯರಿಗೆ ಈ ವಿಶೇಷ ಕೊಡುಗೆಯನ್ನು ನೀಡಿದ್ದು, ಮಹಿಳೆಯರಾಗಿ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡ ಲೇಡೀಸ್ ಜಿಮ್ ನ್ನು ಪರಿಚಯಿಸಿದ್ದು, ಇದೀಗ ಲೇಡೀಸ್ ಜಿಮ್ ಇನ್ನಷ್ಟು ವ್ಯಾಯಾಮ ಸಲಕರಣೆಗಳೊಂದಿಗೆ ಅತ್ಯಂತ ಸುಸಜ್ಜಿತ ಮಹಿಳಾ ಜಿಮ್ ಆಗಿ ಪರಿವರ್ತನೆಗೊಂಡಿದೆ.

ನವೀಕೃತ ಜಿಮ್ ಅನ್ನು ಫಾದರ್ ಆಂಟೋನಿ ಪ್ರಕಾಶ್ ಮೊಂತೇರೋ ಅವರು ಆಶೀರ್ವದಿಸಿ ಉದ್ಘಾಟಿಸಿದರು. ಆರೋಗ್ಯ ಆಕಾಂಕ್ಷಿಗಳಾದ ಪುತ್ತೂರಿನ ಜನತೆ ವ್ಯಾಯಾಮ ಶಾಲೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರು ವಿನಂತಿಸಿದ್ದಾರೆ.



































