ಪುತ್ತೂರು: ಖಾಸಗಿ ಆಸ್ಪತ್ರೆಯ ನರ್ಸ್ (ಆರೋಗ್ಯ ಸಹಾಯಕಿ) ಒಬ್ಬರು ಪ್ರಿಯತಮನೊಂದಿಗೆ ತೆರಳುವುದಾಗಿ ಆಸ್ಪತ್ರೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.
ಬೆಳ್ಳಾರೆ ಮೂಲದ ಯುವತಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ನಿನ್ನೆ ತಡರಾತ್ರಿಯಿಂದ ಯುವತಿ ನಾಪತ್ತೆಯಾಗಿದ್ದಾಳೆ ಎನ್ನಲಾಗುತ್ತಿದ್ದು, ಆಸ್ಪತ್ರೆಗೆ ಆಗಮಿಸಿದ ಯುವತಿ ಮನೆಯವರು ಠಾಣೆಗೆ ದೂರು ನೀಡಲು ತೆರಳಿರುವುದಾಗಿ ವರದಿಯಾಗಿದೆ.