ಪುತ್ತೂರು: ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್‌ನಿಂದ ನುಳಿಯಾಲು ಧರ್ಮಚಾವಡಿ ಎಂಬಲ್ಲಿ ಏ.೨೪ ಮತ್ತು ೨೫ ರಂದು ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುವ ಧರ್ಮನೇಮದ ಅಂಗವಾಗಿ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಏ.೪ ರಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಸೇವಾಕರ್ತರಾದ ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್‌ನ ಸಮಸ್ತ ಕುಟುಂಬಿಕರು ಉಪಸ್ಥಿತರಿದ್ದರು.