ಉಡುಪಿ: ಮೊದಲ ಪ್ರಕರಣದಲ್ಲಿ, ಅಪರಿಚಿತ ದುಷ್ಕರ್ಮಿಗಳು ಬಾದಗುಬೆಟ್ಟು ಗ್ರಾಮದ ಬೈಲೂರು ಎನ್‌ಜಿಒ ಕಾಲೋನಿ ನಿವಾಸಿ ಹರೀಶ್ ಕುಮಾರ್ ಭಟ್ (42) ಅವರ ಮನೆಯ ವರಾಂಡಾದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ಏ.5 ಸಂಭವಿಸಿದೆ. ಅಪರಿಚಿತ ದುಷ್ಕರ್ಮಿಗಳು ಮನೆಯ ಹೋರಗೆ ಬೀಗ ಹಾಕಿ ನಿಲ್ಲಿಸಿದ್ದ ಹಾಕಿ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಬೈಕ್ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟುಹೋಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಬೈಲೂರ್ ಬಳಿಯ ಬಾದಗುಬೆಟ್ಟು ಗ್ರಾಮದ ಎನ್‌ಜಿಒ ಕಾಲೋನಿಯಲ್ಲಿ ಆಟೋ ರಿಕ್ಷಾ ಮಾಲೀಕ ಅಬ್ದುಲ್ ರಶೀದ್ (50) ಅವರೌ ಮನೆಯ ಗೇಟ್ ಮುಂದೆ ರಿಕ್ಷಾ ಪಾರ್ಕ್ ಮಾಡಿದ್ದು, ಅದಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಏ.5ರಂದು ನಡೆದಿದೆ. ಈ ಘಟನೆಯಲ್ಲಿ ಅಂದಾಜು ನಷ್ಟ 2.25 ಲಕ್ಷ ರೂ. ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.