ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂದ ಮಹಿಳೆ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ.
ಮಹಿಳೆ ದುಗಲಡ್ಕದ 60 ವರ್ಷ ಪ್ರಾಯದ ಮೈಮುನಾ ಎಂದು ಗುರುತಿಸಲಾಗಿದೆ.

ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಂದ ಮಹಿಳೆ ಸೋಣಂಗೇರಿಯಲ್ಲಿ ಇಳಿಯಲಿದ್ದರು, ಆದರೆ ಮಹಿಳೆ ಬಸ್ ನಿಲ್ಲುವ ಮೊದಲೇ ಇಳಿದ ಕಾರಣ ಬಸ್ ನಿಂದ ಬಿದ್ದು ಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣ ಸಂತೋಷ್ ಕೊಡಿಯಾಲ ಮತ್ತಿತರರು ಸೇರಿ ಗಾಯಗೊಂಡ ಮಹಿಖೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೆಂದು ತಿಳಿದುಬಂದಿದೆ.