ವಿಟ್ಲ: ಆಕಸ್ಮಿಕವಾಗಿ ಬಾವಿಗೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ವಿಟ್ಲದ ನೀರಕಣಿಯಲ್ಲಿ ನಡೆದಿದೆ.
ಕೂಡೂರು ನಿವಾಸಿ ಬಾಬು ಪೂಜಾರಿ ಅವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ರಸ್ತೆ ಬದಿಯ ಬಾವಿಗೆ ಬಿದ್ದಿದ್ದಾರೆ.
ಬಾವಿಯೊಳಗಡೆ ಬಿದ್ದ ಬಾಬು ಪೂಜಾರಿ ಅವರು ಬೊಬ್ಬೆ ಹೊಡೆಯುವುದನ್ನು ಕೇಳಿದ ಸ್ಥಳೀಯರು ಆಗಮಿಸಿದ್ದು, ಹಮೀದ್ ಎಂಬವರು ಬಾವಿಗೆ ಇಳಿದು ಹಗ್ಗಕಟ್ಟಿ ಬಾಬು ರನ್ನು ಮೇಲಕ್ಕೆತ್ತಿದ್ದಾರೆ. ಸಿದ್ದೀಕ್ ಗಮಿ, ಇಚ್ಚಾಲಿ ಗಮಿ, ಶಾಪಿ ಗಮಿ, ಇಸುಬು ಮೇಗಿನಪೇಟೆ, ಜಮಾಲ್ ಎಂಬವರು ವಾಹನ ತಂದು ಬಾಬು ರವರನ್ನು ಆಸ್ಪತ್ರೆಗೆ ಸಾಗಿಸಿದರು.