ವಿಟ್ಲ: ಹಿಂದೂ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಸಮೀಪದ ಪಡಾರು ಬೊಳ್ಳಾದೆ ಎಂಬಲ್ಲಿ ನಡೆದಿದ್ದು, ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸಿದ್ದು, ಕಾನೂನು ಕ್ರಮಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಿದೆ.

ಸೆ.20 ರಂದು ಬೆಳಗ್ಗೆ ಬೊಳ್ಳಾದೆ ಮೈದಾನ ಗುಡ್ಡದಲ್ಲಿ ಇಬ್ಬರು ಯುವತಿಯರು, ಅನ್ಯಕೋಮಿನ ಯುವಕನೊಂದಿಗೆ ಸಂಶಯಾಸ್ಪದವಾಗಿ ಗುಡ್ಡದಲ್ಲಿ ತಿರುಗಾಡುತ್ತಿದ್ದು, ಈ ವಿಷಯ
ತಿಳಿದ ಸ್ಥಳೀಯ ಸಾರ್ವಜನಿಕರು ಅವರನ್ನು ವಿಚಾರಿಸಿದಾಗ ಅವರು ಸಿದ್ದಿಕ್‌ನ ಆಟೋರಿಕ್ಷಾದಲ್ಲಿ ತಂದು ಬಿಟ್ಟಿರುತ್ತಾನೆ. ಸಿದ್ದಿಕ್ ನ ನಿಕಟವರ್ತಿ ಆಯಿಷ ಎಂಬ ಮಹಿಳೆ ಇವರನ್ನು ಕರೆದುಕೊಂಡು ಹೋಗಳು ಬಂದಿದ್ದರು. ಈ ಸಂಧರ್ಭದಲ್ಲಿ ಸಂಶಯ ಬಂದು, ಆಯಿಷಾ ತಮ್ಮ ಮನೆಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈ ಅನೈತಿಕ ಚಟುವಟಿಕೆಯಲ್ಲಿ ಯುವತಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ಈ ಅನೈತಿಕ ಚಟುವಟಿಕೆಗೆ ಭಾಗಿಯಾಗುವಂತೆ, ಕುಮ್ಮಕ್ಕು ನೀಡುತ್ತಿರುವ ವಿಷಯ ಗಮನಕ್ಕೆ ಬಂದಿದ್ದು ಹಾಗೂ ಸಿದ್ದಿಕ್ ಗಾಂಜಾ ವ್ಯವಹಾರ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಆಯಿಷಾ ಮನೆಗೆ ಸಂಶಯಾಸ್ಪದವಾದ ಕೇರಳ ನೊಂದಾವಣಿಯ ವಾಹನಗಳು
ಬರುತ್ತಿರುವುದು ಗಮನಿಸಿರುತ್ತೇವೆ.
ಇಂದು ಸಿಕ್ಕ ಇಬ್ಬರು ಯುವತಿಯರನ್ನು ಮತ್ತು ಕರೆ ತಂದ ಯುವಕ ಅನೈತಿಕ ಚಟುವಟಿಕೆಗೆ ಕರೆ ತಂದಿರುವ ಬಗ್ಗೆ ಬಲವಾದ ಸಂಶಯ ಇದೆ. ಆದ್ದರಿಂದ ಈ ಪ್ರದೇಶ ಹಳ್ಳಿ ಪ್ರದೇಶವಾದ ಕಾರಣ ಈ ವಿಷಯದಿಂದ ಇಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಶಾಂತಿ, ನೆಮ್ಮದಿ, ಭಂಗವಾಗಿರುತ್ತಿದ್ದು, ಇದೆ ರೀತಿ ಮುಂದುವರಿದಲ್ಲಿ ಈ ಪ್ರದೇಶ ಶಾಂತಿ ಕದಡುವ ಸಾಧ್ಯತೆ ಇದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವತ್ತು ಸಿಕ್ಕ ಇಬ್ಬರು ಯುವತಿಯರನ್ನು ಮತ್ತು ಯುವಕನನ್ನು ವಿಚಾರಿಸಿ, ಸಿದ್ದಿಕ್ ಮತ್ತು ಆಯಿಷಾ ಇವರಿಗೆ ಮತ್ತು ಇವತ್ತು ಸಿಕ್ಕವರ ಜೊತೆ ಇರುವ ಸಂಪರ್ಕವನ್ನುವಿಚಾರಿಸಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರು ಉಪಸ್ಥಿತರಿದ್ದರು.
