ಪುತ್ತೂರು: ದಿ ಆರ್ಟ್ ಆಫ್ ಜ್ಯುವೆಲ್ಲರಿ (ಎಒಜೆ) ಮ್ಯಾಗಜೀನ್ 2025-26ರ ಅವಧಿಗೆ ಭಾರತದ ಅತ್ಯುತ್ತಮ 100 ಜ್ಯುವೆಲ್ಲರಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪುತ್ತೂರು ಸಹಿತ ಹಲವು ಕಡೆ ಶಾಖೆಗಳನ್ನು ಹೊಂದಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಕೂಡಾ ಟಾಪ್ ಪಟ್ಟಿಗೆ ಸೇರಿದೆ.
ದಿ ಆರ್ಟ್ ಆಫ್ ಜ್ಯುವೆಲ್ಲರಿ ಸಂಚಿಕೆಯಲ್ಲಿ ಭಾರತದಲ್ಲಿ ಚಿನ್ನ ಮತ್ತು ಆಭರಣಗಳ ಉದ್ಯಮದಲ್ಲಿ ಸಾಧಕರನ್ನು ಗುರುತಿಸುತ್ತದೆ. ಈ ಭಾರಿ ಟಾಪ್ 100 ಚಿನ್ನದ ವ್ಯಾಪಾರಿಗಳನ್ನು ಆರ್ಥಿಕ ವರ್ಷದ 2025ರಲ್ಲಿ ಒಟ್ಟು ವ್ಯವಹಾರ, ಆದಾಯದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯನ್ನು ಇಂಟರ್ ನ್ಯಾಷನಲ್ ಜಿಮೋಲಿಜಿಕಲ್ ಇನ್ ಸ್ಟಿಟ್ಯೂಟ್ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಚಿನ್ನಾಭರಣ ಮಳಿಗೆ ಟಾಪ್ 100 ಚಿನ್ನಾಭರಣಗಳ ಮಳಿಗೆಗಳ ಪೈಕಿ 85ನೇ ಸ್ಥಾನ ಪಡೆದುಕೊಂಡಿದೆ.
ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ಭಾರತದ ಆಭರಣ ಉದ್ಯಮದ ಪ್ರಮುಖ ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಒದಗಿಸುವ ಪ್ರಮುಖ ಮಾಧ್ಯಮವಾಗಿದೆ. ಜ್ಯುವೆಲ್ಲರಿಗಳ ಒಟ್ಟು ವ್ಯವಹಾರದಲ್ಲಿ ಈ ಆಯ್ಕೆ ನಡೆಯುತ್ತದೆ. ನಮ್ಮ ಸಂಸ್ಥೆಗೆ 85ನೇ ಸ್ಥಾನ ಲಭಿಸಿದೆ ಎಂದು ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಮಳಿಗೆಯ ಚೆಯರ್‌ಮೆನ್ ಕೇಶವಪ್ರಸಾದ್ ಮುಳಿಯ ಮತ್ತು ಆಡಳಿತ ನಿದೇರ್ಶಕ ಕೃಷ್ಣನಾರಾಯಣ ಮುಳಿಯ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.



























