ಮಂಗಳೂರು: ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ತಪ್ಪಿಸಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಏರ್ಪೋರ್ಟ್ ರಸ್ತೆಯಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿನಿಂದ ಮೂವರು ವಿದ್ಯಾರ್ಥಿನಿಯರು ತಪ್ಪಿಸಿಕೊಂಡು ಹೋಗಿದ್ದಾರೆನ್ನಲಾಗಿದೆ.

ಯಶಸ್ವಿನಿ, ದಕ್ಷತಾ, ಸಿಂಚನ ಪರಾರಿಯಾದ ವಿದ್ಯಾರ್ಥಿನಿಯರು. ಕಾಲೇಜಿನ ಆವರಣದಲ್ಲಿ ಇರುವ ಹಾಸ್ಟೆಲ್ನಿಂದ ಕಿಟಕಿ ಸಲಾಕೆಗಳನ್ನು ಮುರಿದು ಪರಾರಿಯಾಗಿದ್ದಾರೆ.
ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದು, ಸಿಂಚನ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾಳೆ.
ನಾವು ಹೋಗುತ್ತಿದ್ದೇವೆ ಕ್ಷಮಿಸಿ ಎಂದು ಪತ್ರ ಬರೆದಿಟ್ಟು ವಿದ್ಯಾರ್ಥಿನಿಯರು ತೆರಳಿದ್ದಾರೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..
