ಉಪ್ಪಿನಂಗಡಿ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಮಗುಚಿ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನಿನ್ನೆ ತಡರಾತ್ರಿ ಉಪ್ಪಿನಂಗಡಿಯ ಕೂಟೇಲು ಸೇತುವೆಯ ಸಮೀಪ ಸಂಭವಿಸಿದೆ.


ಲಾರಿ ಚಾಲಕ ಮಧ್ಯಪ್ರದೇಶದ ನಿವಾಸಿಗಳಾದ ನಾರಾಯಣ್, ನಿರ್ವಾಹಕ ಪುಷ್ಟೇಂದ್ರ ಮತ್ತಿಬ್ಬರು ಕಾರ್ಮಿಕರು ಗಾಯಗೊಂಡವರು.

ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ನಿಯುಕ್ತಿಗೊಂಡ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಮಧ್ಯೆ ಮಗುಚಿ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಅಪಘಾತದಿಂದ ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ರಸ್ತೆಯಲ್ಲಿ ಡೀಸೆಲ್ ಸೋರಿಕೆಯಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
