ಪುತ್ತೂರು: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ Zoomintv ನೇತೃತ್ವದಲ್ಲಿ ಅಕ್ಟೋಬರ್ 01 ರ ಶನಿವಾರ ನಡೆಯಲಿರುವ ‘ಪುತ್ತೂರ್ದ ಪಿಲಿ ರಂಗ್ Season -1’ ರ ಆಮಂತ್ರಣ ಪತ್ರದ ಬಿಡುಗಡೆಯು ಸೆ.23 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಕೇಶವ ಪ್ರಸಾದ್ ಮುಳಿಯ ರವರು, ಇಂತಹ ಕಾರ್ಯಕ್ರಮಗಳು ನಮ್ಮ ಊರಿನಲ್ಲಿ ನಡೆಯಬೇಕಾದಂತಹ ಕಾರ್ಯಕ್ರಮವಾಗಿದೆ. ಪಿಲಿಗೊಬ್ಬು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ., ಈ ಹಿನ್ನೆಲೆ ಇಂತಹ ಕಾರ್ಯಕ್ರಮಗಳ ಮೂಲಕ ಅದಕ್ಕೆ ಜಾಸ್ತಿ ಒತ್ತು ನೀಡಿ, ನಮ್ಮ ಸಂಸ್ಕೃತಿ, ನಮ್ಮ ಮಣ್ಣಿನ ಕಲೆ ಹೆಚ್ಚಾಗಬೇಕು. ಈಗಿನ ಮಕ್ಕಳಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು. ಮುಂದಿನ ಪೀಳಿಗೆ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಎಲ್ಲರೂ ಜೊತೆ ಸೇರಿಕೊಂಡು ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಿಲಿರಂಗ್ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಧ್ಯಕ್ಷ ಶಿವರಾಮ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ವಿ, ರೋಶನ್ ರೈ ಬನ್ನೂರು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರಂಜಿತ್ ಬಂಗೇರ, ಅಭಿಷೇಕ್ ಬೆಳ್ಳಿಪ್ಪಾಡಿ, ಶರತ್ ಕೇಪುಳು, ಸನತ್ ರೈ ಎಳ್ನಾಡುಗುತ್ತು, ಸುದೇಶ್ ಶೆಟ್ಟಿ, ವಿಶ್ವದೀಪ್ ಅಮ್ಮುoಜ, ಸನತ್ ಕಾರ್ತಿಕ್, ಬಾನು ಪ್ರಕಾಶ್ ಆಚಾರ್ಯ, , ಕಾರ್ತಿಕ್ ಚಿಕ್ಕಪುತ್ತೂರು, ಕಿಶೋರ್ ಟಿ. ತಾರಿಗುಡ್ಡೆ, ಮನೋಜ್ ಚಿಕ್ಕಪುತ್ತೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
