ವಿಟ್ಲ: ವಿಠಲ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ನಡೆದ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ 39ನೇ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ ರಮೇಶ ನಾಯಕ್ ವಹಿಸಿ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘವು 2021-2022ನೇ ಸಾಲಿನಲ್ಲಿ 507.38 ಕೋಟಿರೂ ವ್ಯವಹಾರ ನಡೆಸಿ 1.59 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 16% ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

2021-2022ನೇ ಸಾಲಿನ ವರ್ಷಾಂತ್ಯಕ್ಕೆ ಸಂಘವು 173 ಕೋಟಿ ರೂ. ಠೇವಣಿ ಹಾಗೂ 162.76 ಕೋಟಿ ರೂ. ಹೊರ ಬಾಕಿ ಸಾಲವಿದೆ. 4478 ಮಂದಿ ಸದಸ್ಯರನ್ನು ಹೊಂದಿದೆ. ಸಂಘದ ಶಾಖೆಗಳು ಉತ್ತಮ ಲಾಭ ಗಳಿಸಿವೆ.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಅಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಮೇಶ್ ನಾಯಕ್ ಕೆ, ಉಪಾಧ್ಯಕ್ಷರಾದ ರಾಜೇಂದ್ರರೈ ಪಿ, ನಿರ್ದೇಶಕರುಗಳಾದ ಮೋನಪ್ಪ ಕೆ, ಸಂಜೀವಎಚ್, ಸುರೇಶ್ ಕುಮಾರ್, ಇಂದು ಶೇಖರ್, ಜಯರಾಮ, ಕಮಲಾಕ್ಷ, ರಾಮಕೃಷ್ಣರಾವ್, ಡಾ. ನವೀನ್ ಕೋಣಾಜೆ, ಗಂಗಾಧರ ಆಳ್ವ ಕೆ.ಎನ್, ಅನಿತಾ ಮಿನೇಜಸ್, ಚಿತ್ರಕಲಾ ಕೆ, ಶ್ರೀ ನವೀನ್ ಪಿ.ಎಸ್, ಪುಷ್ಪರಾಜ್ ಬಿ, ಉಮ್ಮರಗಿ ಶರಣಪ್ಪ, ಭಾರತಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ರಾಜೇಂದ್ರ ರೈ ಪಿ ವಂದಿಸಿದರು, ಪ್ರಭಾರ ಜನರಲ್ ಮೆನೇಜರ್ ಮಾಲತಿ ವಿ.ಎಸ್ ವರದಿ ವಾಚಿಸಿದರು. ನಿರ್ದೇಶಕರಾದ ಗಂಗಾಧರ ಆಳ್ವ ಕೆ.ಎನ್, ಕಾರ್ಯಕ್ರಮ ನಿರೂಪಿಸಿದರು.
