ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕುರಿತಾಗಿ ಹಾಡಿರುವ ಗೀತೆಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಏ.6 ರಂದು ಸಂಜೆ ಮಠಂತಬೆಟ್ಟುವಿನ ‘ಚಿನ್ಮಯೀ’ ಸಭಾಂಗಣದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವದ ಆಚರಣೆಯ ತಯಾರಿಯಲ್ಲಿರುವ ನಮ್ಮ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕುರಿತಾದ ಭಕ್ತಿಗೀತೆಯನ್ನು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೆ.ಎಸ್ ರೈ ಎಸ್ಟೇಟ್ ಕೋಡಿಂಬಾಡಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಲು ಇವರು ಬಿಡುಗಡೆಗೊಲಿಸಿದರು. ಈ ಗೀತೆಯ ನಿರ್ಮಾಣವನ್ನು ದೇವಳದ ಬ್ರಹ್ಮಕಲಶೋತ್ಸವ ಸಮಿತಿಯು ಮಾಡಿದ್ದು, ಸಾಹಿತ್ಯ ರಕ್ಷಿತ್ ಮಂಚಿಕಟ್ಟೆ ಮತ್ತು ಸಂಗೀತ ಹಾಗೂ ಗಾಯನ ತುಳುನಾಡ ಗಾನಗಂಧರ್ವ ಜಗದೀಶ್ ಆಚಾರ್ಯ ಪುತ್ತೂರು ಇವರದ್ದಾಗಿದೆ.