ಪುತ್ತೂರು: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಸಭಾ ಕ್ಷೇತ್ರದ ವಕ್ತಾರರಾದ ಅಮಲ ರಾಮಚಂದ್ರ ಕಾವಿನಮೂಲೆ
ರವರಿಗೆ ಕಾಂಗ್ರೆಸ್ ವಿಶೇಷ ಅಧಿಕಾರ ನೀಡಿ ರಾಜ್ಯ ವಕ್ತಾರರಾಗಿ ಆಯ್ಕೆ ಮಾಡಿದೆ.
ಇವರು ನಡೆಸುವ ಪತ್ರಿಕಾಗೋಷ್ಠಿಗಳನ್ನು ಪರಿಗಣಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಕಾಂಗ್ರೆಸ್ ನ ಸಂವಹನ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಪ್ರಿಯಾಂಕ ಖರ್ಗೆಗೆ ಪರಿಚಯಿಸಿದರು. ಇದೀಗ ಡಿ.ಕೆ ಶಿವಕುಮಾರ್ ವಕ್ತಾರರ ಹೊಸ ಸಮಿತಿ ಘೋಷಿಸಿದ್ದಾರೆ. ಇದರಲ್ಲಿ ಪುತ್ತೂರಿನ ಅಮಲ ರಾಮಚಂದ್ರ ರವರು ರಾಜ್ಯ ವಕ್ತಾರಾಗಿ ಆಯ್ಕೆಯಾಗಿದ್ದು, ಅವರಿಗೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಪತ್ರಿಕಾಗೋಷ್ಠಿ ನಡೆಸುವ ವಿಶೇಷ ಅಧಿಕಾರ ನೀಡಿದ್ದಾರೆ.
ಕಾವಿನಮೂಲೆ ಕುಟುಂಬದವರಾದ ಅಮಲ ರಾಮಚಂದ್ರ ರವರು ಕಾಂಗ್ರೆಸ್ ನ ಮುಖಂಡರಾಗಿದ್ದು, ಕೊಳ್ತಿಗೆ ಗ್ರಾಮ ಪಂಚಾಯತ್
ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
