ಪುತ್ತೂರು: ಬ್ಲಾಕ್ ವ್ಯಾಪ್ತಿಯ ಆರ್ಯಾಪು ವಲಯ ಕಾಂಗ್ರೆಸ್ ಸಭೆಯು ಅಧ್ಯಕ್ಷರಾದ ಪ್ರಜ್ವಲ್ ರೈ ತೊಟ್ಲ ರವರ ಅಧ್ಯಕ್ಷತೆಯಲ್ಲಿ ಸಂಪ್ಯದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಯವರು ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ವಿವರಿಸಿ, ಆರ್ಯಾಪು ವಲಯದಿಂದ ಅತ್ಯಂತ ಹೆಚ್ಚು ಕಾರ್ಯಕರ್ತರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಅರ್ಯಾಪು ವಲಯ ಕಾಂಗ್ರೆಸ್ ನ ಉಸ್ತುವಾರಿಗಳಾದ ಮಹಾಬಲ ರೈ ಒಳತಡ್ಕ, ಆರ್ಯಾಪು ಸಹಕಾರಿ ಸಂಘದ ನಿರ್ದೇಶಕರಾದ ಹಾರೀಶ್ ಸಂಟ್ಯಾರ್,ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕ ಪ್ರದಾನ ಕಾರ್ಯದರ್ಶಿ ಬಾಬು ಮರಿಕೆ,ಬೂತ್ ಸಮಿತಿ ಅಧ್ಯಕ್ಷ ಸಲಾಂ ಸಂಪ್ಯ,ಕಾಂಗ್ರೆಸ್ ಮುಖಂಡರಾದ ಅದಂ ಕಲ್ಲರ್ಪೆ, ಬಾತೀಶ್ ಒಳತಡ್ಕ ಕೊಪ್ಪಳ,,ಮಹೇಶ್ ಪರ್ಪುಂಜ,ಪ್ರಶಾಂತ್ ಮರಿಕೆ, ಬಷೀರ್ ಸಂಪ್ಯ ಅಂದಂಚ ಸಂಪ್ಯ ಮೊದಲಾದವರು ಉಪಸ್ಥಿತರಿದ್ದರು.