ಪುತ್ತೂರು : ಶೌಚಾಲಯದ ಗುಂಡಿ ತೆಗೆಯುವ ಸಂಬಂಧ ಹಾರೆ ಪಿಕ್ಕಾಸು ತರಲು ಹೋದ ವೇಳೆ ಹಲ್ಲೆ ನಡೆಸಲಾಗಿದೆ ಎಂದು ಒಂದು ತಂಡದವರು ಹಾಗೂ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದಾರೆಂದು ಇನ್ನೊಂದು ತಂಡದವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಅವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೊಟ್ಟೆತ್ತಡ್ಕದಲ್ಲಿ ಮನೆಯೊಂದಕ್ಕೆ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಂತೆ ಕೂರ್ನಡ್ಕದ ಸಂಜಯಪುರ ನಿವಾಸಿಗಳಾದ ಮಹಮ್ಮದ್ ಝೆದ್, ಅವರ ಸಹೋದರ ಮುಬಾಶೀರ್ ಮತ್ತು ಮಹಮ್ಮದ್ ಆಲಿಯವರು ಧರ್ಮಾರ್ಥವಾಗಿ ಕೆಲಸ ಮಾಡುವುದಾಗಿ ಒಪ್ಪಿಕೊಂಡು ಬಳಿಕ ಅರ್ಧದಲ್ಲಿ ಕೆಲಸ ನಿಲ್ಲಿಸಿ ಸಂಬಳ ಕೊಡುವಂತೆ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ 2,500 ರೂ.ಅನ್ನು ಗೂಗಲ್ ಪೇ ಮಾಡಿದ್ದೆ, ಆದರೆ ಅವರು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ನಾನು ಬೇರೆ ಕೆಲಸದವರ ಮೂಲಕ ಟಾಯ್ಲೆಟ್ ನಿರ್ಮಿಸಲು ಹೋದಾಗ ಅಲ್ಲಿನ ಹಾರೆ ಪಿಕ್ಕಾಸ್ ಸಲೀಂ ರವರ ಮನೆಯಲ್ಲಿರುವುದು ತಿಳಿದು. ಏ.5ರಂದು ರಾತ್ರಿ ಸಲೀಂ ಅವರ ಮನೆಗೆ ಹೋಗಿ ವಿಚಾರಿಸಿದಾಗ ಆರೀಸ್, ಮಹಮ್ಮದ್ ಆಲಿ ಝಯೀದ್, ಬುಬಾಶಿರ್, ನಿಝಮ್ ಮಹಮ್ಮದ್ ಆಲಿ, ಮಹಮ್ಮದ್ ರವರು ಕಾರನ್ನು ಸುತ್ತುವರಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟು ಮಾಡಿದ್ದಾರೆ.ಕಾರಿಗೆ ಹಾನಿಯುಂಟು ಮಾಡಿದ್ದರಿಂದ 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಕೂರ್ನಡ್ಕ ನಿವಾಸಿ ಮಹಮ್ಮದ್ ಝದ್ ರವರ ಪತ್ನಿ ರಜ್ಮಿ(22) ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ವೇಳೆ ನನ್ನ ನಾದಿನಿ ಜೈನಾಬಿ ಮತ್ತು ಅವರ ಮಗಳು ರಂಶೀನಾ ಮನೆಯಲ್ಲಿದ್ದಾಗ ಅಬ್ದುಲ್ ಹಕೀಂ ರವರು ಮನೆಗೆ ಅಕ್ರಮ ಪ್ರವೇಶ ಮಾಡಿ ನನ್ನ ಗಂಡನನ್ನು ವಿಚಾರಿಸಿದ್ದರು, ನಾನು ಗಂಡ ಹೊರಗೆ ಹೋಗಿದ್ದಾರೆ ಎಂದಾಗ ನನ್ನ ಗಂಡನ ವಿರುದ್ಧ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ನನ್ನ ಗಂಡನನ್ನು ನೋಡಿ ಹಕೀಂ ಮನೆಯಂಗಳಕ್ಕೆ ಹೋಗಿ ಅಲ್ಲಿದ್ದ ಇಂಟರ್ ಲಾಕ್ ತುಂಡನ್ನು ಹೆಕ್ಕಿಕೊಂಡು ನನ್ನ ಗಂಡನ ಹಣೆಗೆ ಹಲ್ಲೆ ನಡೆಸಿದ್ದಾರೆ. ನಾನು ತಡೆಯಲು ಹೋದಾಗ ನನ್ನನ್ನು ದೂಡಿ ಹಾಕಿದ್ದಾರೆ. ಹಲ್ಲೆ ಸಂದರ್ಭದಲ್ಲಿ ನನ್ನ ಗಂಡನ ಸಹೋದರ ಮುಬಾಶಿರ್ ಬಂದು ಹಲ್ಲೆ ತಡೆಯಲು ಯತ್ನಿಸಿದಾಗ ಅವರಿಗೂ ಹಕೀಂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಇತ್ತಂಡದ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.