ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ತಿ ವಿಭಾಗ ಸಂಬಂಧ ಪತ್ನಿ ಅನುರಾಧಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್ ಸದ್ಯ ಆಸ್ತಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.
ಮುತ್ತಪ್ಪ ರೈ ಅವರು ನಿಧನರಾದ ಬಳಿಕ ಎರಡನೇ ಪತ್ನಿ ಅನುರಾಧಾ ಅವರು ಪತಿಯ ಆಸ್ತಿಯನ್ನು ಪರಭಾರೆ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುತ್ತಪ್ಪ ರೈ ಪುತ್ರ ರಾಕಿ, ರಿಕ್ಕಿ ಸೇರಿ 17 ಮಂದಿ ಪ್ರತಿ ವಾದಿಗಳಿಗೆ ಮೂರನೇ ವ್ಯಕ್ತಿಗಳ ಪರವಾಗಿ ಹಕ್ಕು ಸೃಷ್ಟಿಸದಂತೆ ಮಧ್ಯಂತರ ಆದೇಶ ನೀಡಿದೆ.
ರೈ ಯವರ ಆಸ್ತಿ ವಿವರಗಳು: ನ್ಯಾವಿನಲ್ಲಿ ತೋಟ (ಎಸ್ಟೇಟ್), ಎಂ ಆರ್ ಸ್ಟಡ್ ಫಾರ್ಮ್‌ಗಳು ಪ್ರೈವೇಟ್ ಲಿಮಿಟೆಡ್, ಎಂ ಆರ್ ಎನ್ ಡೆವಲಪರ್ಸ್, ಉನ್ನತಿ ಗ್ರಾನೈಟ್‌ಗಳು,ಎಂ ಆರ್ ಎಸ್ ವೆಂಚರ್ಸ್, ಫೋರ್ ಎಂ ಪ್ರೊಪೆರ್ಟಿಸ್, ಆಲ್ಫಾ ದೇವನಹಳ್ಳಿ ಪ್ರಾಪರ್ಟೀಸ್ ಎಲ್ ಎಲ್ ಪಿ, ಆಲ್ಫಾ ಕನ್ಸೋಲಿಡೇಟೆಡ್ ಪ್ರಾಜೆಕ್ಟ್ಸ್ (ಇಂಡಿಯಾ) ಎಲ್ ಎಲ್ ಪಿ, ಎಮ್ಆರ್ ವೆಂಚರ್ಸ್, ಬಿಡಡಿ ರಿಯಾಲಿಟಿ ವೆಂಚರ್ಸ್, ಫೋರ್ ಆರ್ ಬಿಲ್ಡರ್ಸ್, ಗಾಂಟಿಗನಹಳ್ಳಿ, ಮಡಿಕೇರಿ,ಕೊಡಂಬೂರ್ ವಿಲೇಜ್, ಹಾಂಚ್ಯಾ ವಿಲೇಜ್, ಮೈಸೂರು, ಪಾಂಡವಪುರ,ಶಿವಮೊಗ್ಗ, ರಾಜ್ ಮಹಲ್ ಅಪಾರ್ಟ್ಮೆಂಟ್, ವಿಸ್ಟಾ ಫ್ಲಾಟ್, ಮೈಸೂರ್ ಮನೆ, ಮೈಸೂರು ಭೂಮಿ,ಸಕಲೇಶ್ ಪುರ ಲೇಔಟ್, ನಂದಿ ಲ್ಯಾಂಡ್ (ಕೆಂಪತಿಮ್ಮನಹಳ್ಳಿ).