ಉಪ್ಪಿನಂಗಡಿ: ಕಾನ್ವೆಂಟ್ ಒಂದಕ್ಕೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಆರೋಪಿಗಳು ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಹಾಕಿದ ಘಟನೆ ಕಡಬದ ಕೌಕ್ರಾಡಿ ಬೆಥನಿ ಕಾನ್ವೆಂಟ್ ನೆಲ್ಯಾಡಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಸಿಸ್ಟರ್ ಮಹಿಳೆ ನೀಡಿದ ದೂರಿನ್ವಯ ಸದ್ದಾಂ ಮತ್ತು ಇಸ್ಮಾಯಿಲ್ ಎಂಬವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿಯ ಆರೋಪಿಗಳಾದ ಸದ್ದಾಂ ಹಾಗೂ ಇಸ್ಮಾಯಿಲ್ ಎಂಬವರು ಕಾನ್ವೆಂಟಿಗೆ ಅಕ್ರಮ ಪ್ರವೇಶ ಮಾಡಿದಾಗ ಸಿಸ್ಟರ್ ಮಹಿಳೆಯೋರ್ವರು ಈ ಸಮಯಕ್ಕೆ ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ಇದನ್ನು ಕೇಳಲು ನೀನು ಯಾರು ನಾವು ಯಾವಾಗ ಬೇಕಾದರೂ ಬರುತ್ತೇವೆ. ಎಂಬುದಾಗಿ ಅವಾಚ್ಯವಾಗಿ ಬೈದಿದ್ದು, ಚರ್ಚ್ ನಲ್ಲಿ ಸಭೆ ನಡೆಯುತ್ತಿದ್ದು, ಇವರ ಬೊಬ್ಬೆ ಕೇಳಿ ಸೋನು ಜಾರ್ಜ್ ಎಂಬವರು ಅಲ್ಲಿಗೆ ಬಂದಾಗ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿರುತ್ತಾರೆ.

ನಮಗೆ ಪೊಲೀಸರು ಎಲ್ಲರು ಪರಿಚಯ ಇದ್ದಾರೆ. ನಿಮ್ಮಿಂದ ನಮ್ಮನು ಏನು ಮಾಡಲು ಸಾದ್ಯ ಇಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಅಲ್ಲದೇ ಈ ವಿಚಾರವನ್ನು ನೀವು ಯಾರಿಗಾದರೂ ಹೇಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 101/2022 ಕಲಂ:447,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..
