ಪುತ್ತೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕಾಶ್ಮೀರದ ವರೆಗೆ ಹಮ್ಮಿಕೊಂಡಿರುವ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಸೆ.30 ರಂದು ಕರ್ನಾಟಕದ ರಾಜ್ಯದ ಗುಂಡ್ಲುಪೇಟೆಗೆ ಯಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿ ಬ್ಲಾಕ್ ಕಾಂಗ್ರೆಸ್ ಆಗಮಿಸಲಿದ್ದು, ಪುತ್ತೂರು ವ್ಯಾಪ್ತಿಯಿಂದ ನೂರಾರು ಕಾರ್ಯಕರ್ತರು ಗುಂಡ್ಲುಪೇಟೆಗೆ ತೆರಳಿದ್ದಾರೆ.
ಸೆ.29 ರಂದು ಸಂಜೆ ಅಮ್ಮಿನಡ್ಕದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ರವರು ತೆಂಗಿನ ಕಾಯಿ ಒಡೆದ ಬಳಿಕ ಭಾರತ್ ಜೋಡೋ ಯಾತ್ರೆಯ ಸಂಯೋಜಕರಾದ ದಿವ್ಯಪ್ರಭಾ ಗೌಡ ಚಿಲ್ಲಡ್ಕ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಮಲ ರಾಮಚಂದ್ರ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಮಾರು 15 ಬಸ್‌ಗಳಲ್ಲಿ ನೂರಾರು ಕಾರ್ಯಕರ್ತರು ಭಾರತ್
ಜೋಡೋ ಯಾತ್ರೆಗೆ ತೆರಳಿದರು. ಅಷ್ಟೇ ಅಲ್ಲದೇ ಇತರ
ವಾಹನಗಳಲ್ಲಿಯೂ ಹಲವರು ತೆರಳಿದ್ದಾರೆ.
