ಪುತ್ತೂರು: ಸಾಮಾನ್ಯಸಭೆ ನಡೆಯುತ್ತಿದ್ದ ವೇಳೆ ಪಂಚಾಯತ್ ಸಿಬ್ಬಂದಿಯ ಪತಿ ಹಲ್ಲೆಗೈದಿದ್ದಾರೆಂದು ಆರೋಪಿಸಿ ಪಂಚಾಯತ್ ಸದಸ್ಯರೋರ್ವರು ಆಸ್ಪತ್ರೆಗೆ ದಾಖಲಾದ ಘಟನೆ ಸೆ.29 ರಂದು ಹಿರೇಬಂಡಾಡಿಯಲ್ಲಿ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿರುವ ಪಂಚಾಯತ್ ಸದಸ್ಯ ಸತೀಶ್ ಎನ್. ಶೆಟ್ಟಿ ರನ್ನು ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಸತೀಶ್ ಎನ್. ಶೆಟ್ಟಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಶಿವರಾಮ್ ಆಳ್ವ, ರೋಶನ್ ರೈ ಬನ್ನೂರು, ವಿಶ್ವಜಿತ್ ಅಮ್ಮುಂಜ, ಸನತ್ ರೈ ಏಳ್ನಾಡುಗುತ್ತು, ರಂಜಿತ್ ಬಂಗೇರ, ಶರತ್ ಕೇಪುಳು, ಮೊಹಮ್ಮದ್ ರಿಯಾಜ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸನತ್ ಆಸ್ಪತ್ರೆಗೆ ಭೇಟಿ ನೀಡಿ ಸತೀಶ್ ಎನ್. ಶೆಟ್ಟಿ ರವರ ಆರೋಗ್ಯ ವಿಚಾರಿಸಿದರು.
