ಪುತ್ತೂರು: ನವೆಂಬರ್ 14 ರಿಂದ 19ರ ವರೆಗೆ ಜಮ್ಮು ಕಾಶ್ಮೀರದಲ್ಲಿ ಹುಡುಗರು ಮತ್ತು ಹುಡುಗಿಯರ ವಾಲಿಬಾಲ್ ರಾಷ್ಟ್ರೀಯ ಚಾಂಪಿಯನ್ಶಿಪ್ ನಡೆಯಲಿದೆ.
ಅದರ ಪ್ರಯುಕ್ತ ಕರ್ನಾಟಕ ರಾಜ್ಯ ಹುಡುಗಿಯರ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಅ.30 ರಂದು ಕಲ್ಬುರ್ಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಬಳಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹುಡುಗಿಯರ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ
ಎಂ.ಎಂ. ಗುಡಿ ಕರ್ನಾಟಕ ರಾಜ್ಯ ವಾಲಿಬಾಲ್ ಅಡಾಕ್ ಕಮಿಟಿ ಸದಸ್ಯ, ಇಬ್ರಾಹಿಂ ಗೋಳಿಕಟ್ಟೆ ಕರ್ನಾಟಕ ರಾಜ್ಯ ವಾಲಿಬಾಲ್ ಅಡಾಕ್ ಸಮಿತಿ ಸದಸ್ಯ ಡಾ.ಎಚ್. ಎಸ್. ಜಂಗೆ – ಪ್ರಾಂಶುಪಾಲರು, ದೈಹಿಕ ಶಿಕ್ಷಣ, ಕಲ್ಬುರ್ಗಿ ವಿಶ್ವವಿದ್ಯಾಲಯ, ಬಾಬರ್ ಖಾನ್ ಹಿರಿಯ ವಾಲಿಬಾಲ್ ಆಟಗಾರ.
ಡಾ. ಎಸ್.ಜಿ ಕಣ್ಣೂರು, ನಿರ್ದೇಶಕರು, ದೈಹಿಕ ಶಿಕ್ಷಣ, ಕಲ್ಬುರ್ಗಿ ವಿಶ್ವವಿದ್ಯಾಲಯ, ಮೊಹ್ಸಿನ್, ವಾಲಿಬಾಲ್ ಆಟಗಾರ, ಆಶಾ ದರ್ಗಿ, ವಾಲಿಬಾಲ್ ಆಟಗಾರ್ತಿ ಇವರು ಆಯ್ಕೆ ಪ್ರಕ್ರಿಯೆ ಜವಾಬ್ದಾರಿ ವಹಿಸಿಕೊಂಡಿರುತ್ತಾರೆ.
ಭಾಗವಹಿಸುವ ಆಟಗಾರರು ಗಮನಿಸಬೇಕಾದ ವಿಷಯ.
- ಅರ್ಹತೆ: 01-01-2004 ರಂದು ಅಥವಾ ನಂತರ ಜನಿಸಿದ ಆಟಗಾರರು, ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಜನನ ಪ್ರಮಾಣಪತ್ರದೊಂದಿಗೆ ವಯಸ್ಸಿನ ಪುರಾವೆಗಾಗಿ ದಾಖಲೆಗಳು ಹೊಂದಿರಬೇಕು.
- ಆಯ್ಕೆಯ ಹಾದಿಯ ದಿನದಂದು ಯಾರಿಗೂ ವಸತಿ ಮತ್ತು ಆಹಾರವನ್ನು ಒದಗಿಸಲಾಗುವುದಿಲ್ಲ.
ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಲಿಸಿರುವ ಜೂನಿಯರ್ ವಾಲಿಬಾಲ್ ಚಾಂಪಿಯನ್ಶಿಪ್ ನ ಇದರ ಆದೇಶದಂತೆ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಅಡಾಕ್ ಸಮಿತಿಯ ಚೇರ್ಮನ್ ಮತ್ತು ಕಣ್ವೀನರ್ ಆಗಿರುವ ಎಲ್ ಪಿ ಆಂಟೋನಿ ಜೋಸೆಫ್ ಅವರು ಹುಡುಗರ ಮತ್ತು ಆಯ್ಕೆ ಸಮಿತಿಯ ಸದಸ್ಯರನ್ನು ನೇಮಕ ಮಾಡಿರುತ್ತಾರೆ. ಅಲ್ಲದೆ ಆಯ್ಕೆಯಾದ ಆಟಗಾರರಿಗೆ ವಸತಿ ಸೌಲಭ್ಯದೊಂದಿಗೆ 15 ದಿವಸದ ತರಬೇತಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಡಾಕ್ ಕಮಿಟಿಯ ಆಯ್ಕೆ ಸಮಿತಿ ಸದಸ್ಯ ಇಬ್ರಾಹಿಂ ಗೂಳಿ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಡಾಕ್ ಕಮಿಟಿ
ಹೆಚ್ಚಿನ ಮಾಹಿತಿಗಾಗಿ 9845009183, 9901835168, 98809 94849 ಅನ್ನು ಸಂಪರ್ಕಿಸಬಹುದಾಗಿದೆ..


























