ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದೆ.
ಇಂದು ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ ನಡೆದ 2022 ಟಿ20 ವಿಶ್ವಕಪ್ 2ನೇ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಟಿ20 ಫೈನಲ್‌ಗೆ ಪ್ರವೇಶಿಸಿದೆ.
ಭಾರತದ ಈ ಸೋಲು ಭಾರತೀಯ ಕ್ರಿಕೆಟ್ ಪ್ರಿಯರಲ್ಲಿ ನಿರಾಸೆ ಮೂಡಿಸಿದ್ದು, 2022 ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಳ್ಳುವ ಟೀಮ್ ಇಂಡಿಯಾದ ಕನಸು ಈ ಬಾರಿ ಭಗ್ನವಾಗಿದೆ..
ಭಾರತ ನೀಡಿದ 169 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗೆ 170 ರನ್ ಗಳಿಸಿ ಗೆದ್ದು ಬೀಗಿದೆ.
ಟೀಂ ಇಂಡಿಯಾ ಬೌಲರ್ಸ್ ಬೆಂಡೆತ್ತಿದ ಇಂಗ್ಲೆಂಡ್ ಕ್ಯಾಪ್ಟನ್ ಜೋಸ್ ಬಟ್ಲರ್ ಕೇವಲ 49 ಬಾಲ್‌ನಲ್ಲಿ 3 ಸಿಕ್ಸರ್, 9 ಫೋರ್ ಸಮೇತ 80 ರನ್ ಚಚ್ಚಿದ್ರು. ಅಲೆಕ್ಸ್ ಹೇಲ್ಸ್ 47 ಬಾಲ್‌ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 86 ರನ್ ಸಿಡಿಸಿದ್ರು.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಓಪನರ್ ಆಗಿ ಬಂದ ಕೆ.ಎಲ್ ರಾಹುಲ್ ಕೇವಲ 5 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಲಿಲ್ಲ, ಕೇವಲ 28 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಬಂದ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೊನೇವರೆಗೂ ಕ್ರೀಸ್‌ನಲ್ಲಿ ನಿಂತು ಬೌಲರ್ಸ್ ಬೆಂಡೆತ್ತಿದರು. 40 ಬಾಲ್‌ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 50 ರನ್ ಸಿಡಿಸಿದರು.