Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

    ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

    ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

    ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

    ಪೆರುವಾಯಿ: ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಶಾಸಕರಿಗೆ ಸನ್ಮಾನ..!!

    ಪೆರುವಾಯಿ: ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಶಾಸಕರಿಗೆ ಸನ್ಮಾನ..!!

    ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!

    ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಪಲ್ಟಿ; ಚಾಲಕ, ನಿರ್ವಾಹಕ ಪಾರು..!

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಪಲ್ಟಿ; ಚಾಲಕ, ನಿರ್ವಾಹಕ ಪಾರು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಹೊಸ ವರುಷದ ಆರಂಭವೇ ‘ಯುಗಾದಿ’ : ಕೊರೋನಾವೆಂಬ ಮಹಾಮಾರಿ ಭೂಮಿಯಿಂದ ತೊಲಗಿ ಸರ್ವರೂ ನೆಮ್ಮದಿಯ ಬದುಕುವಂತಾಗಲಿ..

April 13, 2021
in ಧಾರ್ಮಿಕ
0
ಹೊಸ ವರುಷದ ಆರಂಭವೇ ‘ಯುಗಾದಿ’ : ಕೊರೋನಾವೆಂಬ ಮಹಾಮಾರಿ ಭೂಮಿಯಿಂದ ತೊಲಗಿ ಸರ್ವರೂ ನೆಮ್ಮದಿಯ ಬದುಕುವಂತಾಗಲಿ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

“ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ” – ದ.ರಾ.ಬೇಂದ್ರೆ , ಹೌದು.. ಪ್ರಕೃತಿಯು ತನ್ನ ಹಳೆಯ ತೊಗಲನ್ನು ಬಿಟ್ಟು ಹೊಸತೊಗಲನ್ನು ಮೈವೆತ್ತುತ್ತಾ ಬರುವ ಈ ಸುಸಮಯದಲ್ಲಿ ಇಡೀ ನಾಡು ಹೊಸತನದ ಗೆಟಪ್ಪಿನಲ್ಲಿದೆ. ಗಿಡ-ಮರ-ಬಳ್ಳಿಗಳು ತಮ್ಮ ಹಳೆಯ ರೂಪವನ್ನು ಬದಲಾಯಿಸಿಕೊಂಡು ಹೊಂಬಣ್ಣದ ಚಿಗುರೆಲೆಯನ್ನು ಹೊದ್ದು ಚಿನ್ನಾಟವಾಡುತ್ತಾ ತೂಗಾಡುತ್ತಿವೆ. ಸಂತನ ಆಗಮನದಿಂದ ಪುಳಕಿತರಾದಂತೆ ಇಡೀ ನಾಡು ತೋರುತ್ತಿದೆ. ಇಂತಹ ಹೊತ್ತಲ್ಲಿ ಇದಕ್ಕೆ ಸೆಡ್ಡು ಹೊಡೆಯುವಂತೆ ಸೂರ್ಯನು ತನ್ನ ರಣಬಿಸಿಲಿನಝಳವನ್ನು ತೋರುತ್ತಾ ಕುಹಕವಾಡುವಂತೆ ಜನರು ಬೆವರಲ್ಲಿ ಮೀಯುತ್ತಾ ಬಸವಳಿದಿದ್ದಾರೆ.

Advertisement
Advertisement

ಆದರೂ ವಸಂತ ಋತುವಿನ ಚೆಲುವು, ಮೋಹಕತೆಗೆ ಆನಂದ ತುಂದಿಲರಾಗಿದ್ದಾರೆ. ಅಲ್ಲದೆ, ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ. ಬಿಸಿಲ ಬೇಗೆಯನ್ನು ತುಂಗೆ ಹೂವಿನ ಕಂಪು, ಮರಿದುಂಬಿಗಳ ಝೇಂಕಾರ, ಹೊಂಗೆ ಮರದ ನೆರಳು ಕೊಂಚ ತಗ್ಗಿಸುವಂತಿವೆ… ಭಾರತೀಯ ಸಂಸ್ಕೃತಿಯಲ್ಲಿ ‘ಯುಗಾದಿ ಹಬ್ಬ’ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ.

Advertisement
Advertisement
Advertisement

ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸ ವರುಷದ ದಿನವು ‘ಯುಗಾದಿ’ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಹೀಗೆ, ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ-ಸಡಗರ ನೀಡುವ ಜೊತೆಗೆ ಅವರ ಮನದಲ್ಲಿ ಹೊಸಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತಿದೆ; ಬಂದಿದೆ. ಗ್ರಾಮೀಣರ ಆಡುಮಾತಿನಲ್ಲಿ ಹೇಳುವುದಾದರೆ, ಯುಗಾದಿಯು “ಉಗಾದಿ” ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ ‘ನವ ಮನ್ವಂತರ’. ಅಲ್ಲದೆ, ಇದು ಭಾರತೀಯರಾದ ನಮ್ಮ ಪಾಲಿಗೆ ‘ಹೊಸವರುಷ‘ದ ಮೊದಲ ದಿನ.

Advertisement

ಯುಗಾದಿಯಂದು ಹರಳೆಣ್ಣೆಯನ್ನು ಮೈ- ಕೈಗೆ ಹಚ್ಚಿಕೊಂಡು, ಸ್ನಾನಮಾಡಿ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವುದು ವಾಡಿಕೆ. ಅಲ್ಲದೆ ಅಂದು ಜೀವನದ ಸಮನ್ವಯ ಸೂತ್ರದ ಸಂಕೇತವಾದ ‘ಬೇವು-ಬೆಲ್ಲ ತಿನ್ನುವುದು’ ಒಂದು ಸತ್ಸಂಪ್ರದಾಯಕ್ಕೆ ಬರೆದ ಮುನ್ನುಡಿಯಾಗುತ್ತದೆ. ಬೇವು-ಬೆಲ್ಲ ತಿನ್ನುವುದರ ಮೂಲ ಉದ್ದೇಶವಿಷ್ಟೆ; ಕಷ್ಟ-ಸುಖ, ನೋವು ನಲಿವು ಪ್ರತಿಯೊಬ್ಬರ ಬಾಳಲ್ಲಿ ಸಮನಾಗಿರಲಿ ಎಂಬುದು. ಇಂಥ ಸದ್ಭಾವನೆಯನ್ನು ಯುಗಾದಿ ಎಲ್ಲರಿಗೂ ತಿಳಿಸುತ್ತದೆ.

ನಲಿವಿನ ಧ್ಯೋತಕ-ಯುಗಾದಿ: ಭಾರತೀಯ ಸಂಸ್ಕೃತಿಯಲ್ಲಿ ‘ಯುಗಾದಿ ಹಬ್ಬ’ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸವರುಷದ ದಿನವು ‘ಯುಗಾದಿ’ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಅಂದು ತಮ್ಮ ನೆಂಟರಿಷ್ಟರು, ಬಂಧು- ಬಾಂಧವರು, ಕುಟುಂಬವರ್ಗದವರೆಲ್ಲರೂ ಒಂದೆಡೆ ಸೇರಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೊಡಗುತ್ತಾರೆ. ಅದಕ್ಕಾಗಿಯೇ ದೊಡ್ಡ ಮರಗಳಿಗೆ ಜೋಕಾಲಿಗಳನ್ನು ಕಟ್ಟಿ ಉಯ್ಯಾಲೆಯಾಡುತ್ತಾ ಕೇಕೆ ಹಾಕಿ ಸಂಭ್ರಮಿಸುತ್ತಾ, ಖುಷಿಪಡುತ್ತಾರೆ. ಇಂತಹ ಸಂಭ್ರಮದ ನೋಟಗಳನ್ನು ಕಾಣಬೇಕಾದರೆ ಗ್ರಾಮೀಣ ಭಾಗಕ್ಕೇ ಹೋಗಬೇಕು. ಆದರೆ, ಶುದ್ಧ ಮನರಂಜನಾತ್ಮಕವಾದ ಇಂಥ ಸಂಭ್ರಮದ ನೋಟಗಳು ನೋಡಲು ಇಂದು ವಿರಳವಾಗಿವೆ.

ಒಲವು ವೃದ್ಧಿಯ ಯುಗಾದಿ: ನಾವು ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯ ದಿನಮಾನದಲ್ಲಿ ಯುಗಾದಿ ಹಬ್ಬವು, ಪರಸ್ಪರರಲ್ಲಿ ಒಲವು ವೃದ್ಧಿಸುವಂತಹ ಆಚರಣೆಯಾಗಿದೆ. ಕೆಲಸ-ಕಾರ್ಯದ ಕಾರಣದಿಂದಲೋ ಮತ್ಯಾವುದೋ ಕಾರಣದಿಂದಲೋ ಅಪರೂಪಕ್ಕೆ ಒಂದೆಡೆ ಸೇರುವ, ವೈಮನಸ್ಸಿನ ಕಾರಣದಿಂದಲೋ ದೂರಾಗಿರುವ ಸಂಬಂಧಿಕರನ್ನು ಮತ್ತೆ ಒಂದೆಡೆ ಸೇರಿಸುವಲ್ಲಿ ಇಂತಹ ಹಬ್ಬ-ಆಚರಣೆಗಳು ಸಹಕಾರಿಯಾಗುತ್ತವೆ.

ಸಹಬಾಳ್ವೆ-ಸಮನ್ವಯಕ್ಕೆ ನಾಂದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ, ಜೀವನದಲ್ಲಿ
ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಆದರೆ, ಕಷ್ಟಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ, ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು. ಇವು ಒಂಥರಾ ಕತ್ತಲು-ಬೆಳಕು, ರಾತ್ರಿ-ಹಗಲು ಹೇಗೆ ಒಂದನೊಂದು ಬಿಟ್ಟಿರಲಾರವೋ ಹಾಗೆಯೇ ಕಷ್ಟವಿಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎಂಬುದು ಸತ್ಯವಾಗಿದೆ. ಈ ಆಶಯದಂತೆ ನಾವು ಯುಗಾದಿ ಹಬ್ಬದಲ್ಲಿ ಬೇವು- ಬೆಲ್ಲವನ್ನು ಹಂಚಿ ತಿನ್ನುತ್ತೇವೆ.

ಕೂಡಿ ಬಾಳಿದರೆ ಸ್ವರ್ಗಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ. ಆ ಮೂಲಕ ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಬಾಳುವೆ ನಡೆಸಬೇಕು. ‘ಸುಖಜೀವನ’ ನಡೆಸುವುದೇ ಸ್ವರ್ಗದ ಹೋಲಿಕೆಗಿರುವ ಮತ್ತೊಂದು ಶಬ್ದ. ಇಂತಹ ಉತ್ತಮೋತ್ತಮ ನಡೆ, ಗುಣಗಳನ್ನು, ಬಿತ್ತುವುದಕ್ಕೆ ಯುಗಾದಿ ನಾಂದಿಯಾಗಲಿದೆ. ಜನರಲ್ಲಿ ಹಳತಾದುದರ ಕೊನೆಯೇ ಹೊಸತನಕ್ಕೆ ಆರಂಭ. ನಾವು ಯಾವುದೇ ಹೊಸದು ಬಂದಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸತಾದುದು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು ‘ಹಳೆಯದರ’ ಪಾಲು, ಸಹಾಯ, ಸಹಕಾರ ಪ್ರಮುಖವಾಗಿದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು.

ಇವೆರಡರಲ್ಲಿ ಯಾವುದಿರದಿದ್ದರೂ ಮತ್ತೊಂದಕ್ಕೆ ಬೆಲೆಯಿರುವುದಿಲ್ಲ. ಈ ವಿಷಯವಾಗಿ ಯುಗಾದಿ ಹಬ್ಬವು ಮೌನವಾಗಿಯೇ ಜನರಲ್ಲಿ ಅರಿವನ್ನು ಮೂಡಿಸುತ್ತದೆ. ಅದಕ್ಕೆಂತಲೇ ಯುಗಾದಿ ಅಂದರೆ, ಮತ್ತೊಂದು ಯುಗದ ಆದಿ; ಆರಂಭ; ಮನ್ವಂತರದ ಬದಲಾವಣೆಯ ಕಾಲ. ಈ ನವಮನ್ವಂತರವು ಸಕಲ ಜೀವಾತ್ಮರಿಗೂ ಲೇಸನ್ನು ತರಲಿ ಎಂಬುದು ಎಲ್ಲರ ಆಶಯವಾಗಲಿ; ಅದು ಪ್ರತಿಯೋರ್ವರ ಆತ್ಮಸಿದ್ಧಿಯ ಭಾವಮಂತ್ರವಾಗಲಿ.

ಯುಗಾದಿ ಹಬ್ಬದ ಶುಭಾಶಯಗಳು…

Previous Post

ಪುತ್ತೂರು : ಶ್ರೀ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ

Next Post

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ : (ಏ.22) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಿಂದ ಹಸಿರುವಾಣಿ ಹೊರಕಾಣಿಕೆ ಹಾಗೂ ನಾಗಬೆರ್ಮೆರ ಮೂರ್ತಿಯ ಭವ್ಯ ಮೆರವಣಿಗೆ

OtherNews

(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ

(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

October 4, 2026
ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!
Featured

ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

September 29, 2026
ಪುತ್ತೂರಿನಲ್ಲಿ ಡಿ.12, 13ರಂದು ಗಿರಿಜಾ ಕಲ್ಯಾಣೋತ್ಸವ: ಪೂರ್ವಭಾವಿ ಸಭೆ..!!
ಧಾರ್ಮಿಕ

ಪುತ್ತೂರಿನಲ್ಲಿ ಡಿ.12, 13ರಂದು ಗಿರಿಜಾ ಕಲ್ಯಾಣೋತ್ಸವ: ಪೂರ್ವಭಾವಿ ಸಭೆ..!!

September 28, 2026
(ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ,  ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!
ಧಾರ್ಮಿಕ

(ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ, ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!

September 24, 2026
ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!
Featured

ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

September 23, 2026
(ಅ.17/18) : ಟೀಮ್ ಅಘೋರ ಉಬಾರ್ (ರಿ.) ತಂಡದ 2 ನೇ ವರ್ಷದ ಪಿಲಿಪಜ್ಜ ಕಾರ್ಯಕ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ

(ಅ.17/18) : ಟೀಮ್ ಅಘೋರ ಉಬಾರ್ (ರಿ.) ತಂಡದ 2 ನೇ ವರ್ಷದ ಪಿಲಿಪಜ್ಜ ಕಾರ್ಯಕ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ..!

September 21, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

October 8, 2026
ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

October 8, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್..!

October 8, 2026
ಆನ್‌ಲೈನ್ ಗೇಮ್‌ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ : ಮನನೊಂದು ನೇಣಿಗೆ ಶರಣಾದ ಬಾಲಕ

ಆನ್‌ಲೈನ್ ಗೇಮ್‌ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ : ಮನನೊಂದು ನೇಣಿಗೆ ಶರಣಾದ ಬಾಲಕ

October 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.