ಪುತ್ತೂರು : ತುಳುನಾಡಿನ ಕಾರಣಿಕ ಪುರುಷರಾದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ಏ.22ರಿಂದ 24ರ ತನಕ ನಡೆಯಲಿರುವ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಏ.22 ರಂದು ಸಂಜೆ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಿಂದ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ಮತ್ತು ನಾಗಬೆರ್ಮೆರ ಮೂರ್ತಿಯ ಭವ್ಯ ಮೆರವಣಿಗೆಯು ಹೊರಡಲಿರುವವುದು.
ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಹಸಿರು ಕಾಣಿಕೆಯನ್ನು ನೀಡಿ ಸಹಕರಿಸಬೇಕು ಹಾಗೂ ಹಸಿರುವಾಣಿ ಹೊರ ಕಾಣಿಕೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸೀಯಾಳ, ತರಕಾರಿ, ಹೂ, ಅಡಿಕೆಗೊನೆ, ಬಾಳೆಗೊನೆ, ಬಾಳೆಎಲೆ,ವೀಳ್ಯದೆಲೆ, ಹಣ್ಣು ಹಂಪಲು, ಕಸಿ, ಹಿಂಗಾರ, ತೆಂಗಿನ ಎಣ್ಣೆ, ಬೆಲ್ಲ, ಬೇಳೆ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು, ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಯವರು ಭಕ್ತಿ ಪೂರ್ವಕವಾಗಿ ಸೇರಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಬೇಕಾಗಿ ಕೋಟಿ ಚೆನ್ನಯ ಸಂಚಲನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಏ.22 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಕಲಶೋತ್ಸವಕ್ಕೆ ಗ್ರಾಮದಿಂದ, ನೆರೆ ಗ್ರಾಮಗಳಿಂದ ನೀಡುವ ಹಸಿರುವಾಣಿ ಹೊರಕಾಣಿಕೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಲಾಗುವುದು, ಭಕ್ತರ ಉದಾರ ದೇಣಿಗೆಯನ್ನು ಸ್ವೀಕರಿಸಲಾಗುವುದು, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗ್ರಾಮದ ಪ್ರತಿ ಮನೆಯಲ್ಲೂ ಶುಚಿತ್ವ ಪಾಲಿಸಿ ಮನೆಯನ್ನು ಗ್ರಾಮವನ್ನು ತಳಿರು-ತೋರಣಗಳಿಂದ ಸಿಂಗರಿಸಬೇಕಾಗಿ ಮತ್ತು ಏ.12ರ ನಂತರ ನಾಗಪ್ರತಿಷ್ಠಾ ಪ್ರಯುಕ್ತ ಗ್ರಾಮಸ್ಥರು ಶುದ್ಧಾಚಾರದಲ್ಲಿ ಇರಬೇಕೆಂದು ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ದೇವಸ್ಥಾನದ ಬ್ಯಾನರ್, ಬಂಟಿಂಗ್ಸ್ ಪೋಸ್ಟರ್, ಪ್ರಚಾರ ಸಾಮಾಗ್ರಿಗಳನ್ನು ಹಾಕುವ ಮೊದಲು ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿಯನ್ನು ಸಂಪರ್ಕಿಸಿ ಅವರ ಅನುಮತಿಯನ್ನು ಪಡೆದುಕೊಳ್ಳಬೇಕಾಗಿ ತಿಳಿಸಿರುತ್ತಾರೆ.