ಪುತ್ತೂರು : ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಸುಸಂದರ್ಭದಲ್ಲಿ ಜರುಗುವ ಭಜನಾಮೃತ-ಭಜನಾ ಸಂಭ್ರಮದ ಸಲುವಾಗಿ ಅಶೋಕ್ ರೈ ಕೋಡಿಂಬಾಡಿ ಇವರ ನಿರ್ಮಾಣದಲ್ಲಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್(ರಿ) ಪುತ್ತೂರು ಇವರು ಅರ್ಪಿಸುವ ಕುಣಿತ ಭಜನೆಗಾಗಿಯೇ ನಿರ್ಮಾಣಗೊಂಡ “ದಾಸ ಭಜನಾಮೃತ” ಎಂಬ ಗಾನ ಗುಚ್ಚವು ಏ.16 ರಂದು ಬಿಡುಗಡೆಗೊಂಡಿತು.
ಆಡಿಯೋ ಪ್ರಪಂಚದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಭಜನಾರ್ಥಿಗಳಿಗಾಗಿಯೇ ಸಂಯೋಜಿಸಲ್ಪಟ್ಟ ದಾಸ ಸಾಹಿತ್ಯಗಳನ್ನೆ ಬಳಸಿಕೊಂಡು ಭಜನಾ ಶೈಲಿಯಲ್ಲೇ ಪ್ರಸ್ತುತ ಪಡಿಸಿರುವ ನಾಡಿನ ಖ್ಯಾತ ಗಾಯಕರು ಹಾಗೂ ವಾದ್ಯವೃಂದಗಳನ್ನೊಳಗೊಂಡ ಅಭೂತಪೂರ್ವ ಗಾನ ಗುಚ್ಚ ಇದಾಗಿದೆ.