ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಹಾರಥೋತ್ಸವವು ಏ.17 ರಂದು ವಿಜೃಂಭಣೆಯಿಂದ ಜರುಗಿತು. ರಥಾರೂಢನಾಗಿ ಶ್ರೀ ಮಹಾಲಿಂಗೇಶ್ವರ ದೇವರು ಭಕ್ತರಿಗೆ ದರುಶನವನ್ನು ನೀಡಿದರು. ಕೊರೊನಾ ನಿಯಾಮಾವಳಿಗಳನ್ನು ಪಾಲಿಸಿಕೊಂಡು ಪೂರ್ವಾಶಿಷ್ಟ ಸಂಪ್ರದಾಯದಂತೆ ಹತ್ತೂರ ಒಡೆಯನ ಜಾತ್ರೋತ್ಸವವು ನಡೆಯಿತು.
ಪುತ್ತೂರು ಬೆಡಿ : ಪುತ್ತೂರು ಜಾತ್ರೆಯ ಸಂದರ್ಭ ಏ.17 ರಂದು “ಪುತ್ತೂರು ಬೆಡಿ’ ಎಂದೇ ಪ್ರಸಿದ್ಧ ಪಡೆದ ಸುಡುಮದ್ದು ಪ್ರದರ್ಶನಗೊಂಡಿತು. ಏ16ರಂದು ಬಲ್ನಾಡು ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪುತ್ತೂರು ಜಾತ್ರೆಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಸಣ್ಣ ಬೆಡಿ ಎನ್ನುತ್ತಾರೆ. ಏ.17 ರಂದು ಶ್ರೀ ದೇವರು ಬ್ರಹ್ಮರಥಾರೋಹಣವಾದ ಬಳಿಕ ದೊಡ್ಡ ಬೆಡಿ ನಡೆಯಿತು.
ಚಿತ್ರ : ತೈಯಂ ಡೈರಿಸ್ ಆಫೀಷಿಯಲ್ ,ವಿಕ್ಕಿ ಫೋಟೋಗ್ರಾಫಿ,ರಾಜ್ ಪ್ರೊಡಕ್ಷನ್