ಬೆಳ್ತಂಗಡಿ : ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯವು ಕಾಲ ಗರ್ಭದಲ್ಲಿ ಕಣ್ಮರೆಯಾಗಿತ್ತು.ಮುಂದೆ ಅದೇ ಸ್ಥಾನ ಭಕ್ತರಿಗೆ ನಡೆಯನ್ನಿಡುವ ಆಲಯವಾಯಿತು. ಶಿವ ಬೇಡನ ರೂಪದಲ್ಲಿ, “ಕಿರಾತಮೂರ್ತಿ ಮಹಾಲಿಂಗೇಶ್ವರ” ಎಂಬ ಹೆಸರಿನಿಂದ ನೆಲೆಯಾಗಿದ್ದಾನೆ ಎಂಬ ನಂಬಿಕೆ ಎಲ್ಲರಲ್ಲೂ ಮೂಡಿತು. ಅದುವೇ ಈಗ ಓಡಿಲ್ನಾಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ದೇಗುಲ.
ಗ್ರಾಮಸ್ಥರು ಒಂದು ದೊಡ್ಡ ತಂಡವನ್ನು ಕಟ್ಟಿಕೊಂಡು ಕಾರ್ಯವನ್ನು ನಡೆಸುತಿದ್ದು. ಮಾಜಿ ಶಾಸಕರಾದಂತ ವಸಂತ ಬಂಗೇರ, ಹೇರಾಜೆ ಮನೆತನದ ರಕ್ಷಿತ್ ಶಿವರಾಂ, ಜಯರಾಮ ಶೆಟ್ಟಿ ಯವರ ಸಮ್ಮುಖದಲ್ಲಿ ದೇವಾಲಯದ ದ್ವಾರಪ್ರತಿಷ್ಠೆ ಮತ್ತು ಕೊಡಿಮರ ತೈಲಾದಿವಾಸ ಕಾರ್ಯಕ್ರಮಗಳು ಏ. 16 ರಂದು ನೆರವೇರಿತು.